Home Blog Page 67

ಕಾರ್ಕಳ:ಅಕ್ಷಯ ತೃತೀಯ ಪ್ರಯುಕ್ತ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ವಿಶೇಷ ರಿಯಾಯಿತಿ

0

ಕಾರ್ಕಳ:ಅಕ್ಷಯ ತೃತೀಯ ಪ್ರಯುಕ್ತ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ವಿಶೇಷ ರಿಯಾಯಿತಿ

ಕಾರ್ಕಳದ ಹೆಸರಾಂತ ಆಭರಣ ಮಳಿಗೆ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ಚಿನ್ನ,ಬೆಳ್ಳಿ ಹಾಗೂ ವಜ್ರಾಭರಣಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ.

ಪ್ರತೀ ಗ್ರಾಂ ಚಿನ್ನಾಭರಣಗಳ ಖರೀದಿಗೆ 200 ರೂಪಾಯಿ ಡಿಸ್ಕೌಂಟ್,ಬೆಳ್ಳಿಯ ಸಾಮಗ್ರಿ ಪ್ರತೀ ಕೆ.ಜಿ.ಗೆ 3000 ರೂಪಾಯಿ ಡಿಸ್ಕೌಂಟ್ ಹಾಗೂ ಪ್ರತೀ ಕ್ಯಾರೆಟ್ ವಜ್ರಾಭರಣಗಳ ಮೇಲೆ 7000ರೂಪಾಯಿ ಡಿಸ್ಕೌಂಟ್ ಲಭ್ಯವಿದೆ.ಈ ಕೊಡುಗೆ ಏಪ್ರಿಲ್ 30ರ ವರೆಗೆ ಮಾತ್ರ.

ಇಂದೇ ಭೇಟಿ ನೀಡಿ ನ್ಯೂ ಪವನ್ ಜ್ಯುವೆಲ್ಲರ್ಸ್, ಸದಾಶಿವ ಟವರ್ಸ್, ಅನಂತಶಯನ ರಸ್ತೆ, ಕಾರ್ಕಳ.

ಬಿಜೆಪಿಯಿಂದ ಉದಯ್ ಎಸ್. ಕೋಟ್ಯಾನ್ ಉಚ್ಚಾಟನೆ

0

ಭಾರತೀಯ ಜನತಾ ಪಕ್ಷ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಉದಯ್ ಕೋಟ್ಯಾನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್) ಚುನಾವಣೆಯಲ್ಲಿ ಪಕ್ಷದ ಅಧಿಕೃತ ನಿರ್ಧಾರಕ್ಕೆ ವಿರುದ್ಧವಾಗಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಈ ಉಚ್ಚಾಟನೆ ಮಾಡಲಾಗಿದೆ.

ಜೆಇಇ ಮೈನ್ಸ್–2025-ಕ್ರೈಸ್ಟ್ ಕಿಂಗ್ ನ ಅನಂತ್ ಎನ್.ಕೆ. ಸಾಧನೆ

0

ಜೆಇಇ ಮೈನ್ಸ್–2025:ಕ್ರೈಸ್ಟ್ ಕಿಂಗ್ ನ ಅನಂತ್ ಎನ್.ಕೆ. ಸಾಧನೆ

ಕ್ರೈಸ್ಟ್ ಕಿಂಗ್: ರಾಷ್ಟ್ರಮಟ್ಟದ ಜೆಇಇ ಮೈನ್ಸ್–2025 (ಹಂತ -2) ಪರೀಕ್ಷೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಅನಂತ್ ಎನ್.ಕೆ 99.6912 ಪರ್ಸೆಂಟೈಲ್‌ನೊAದಿಗೆ ಅಭೂತಪೂರ್ವ ಸಾಧನೆ

ರಾಷ್ಟ್ರ ಮಟ್ಟದ ಜೆಇಇ ಮೈನ್ಸ್–2025 (ಹಂತ – 2) ಪರೀಕ್ಷೆಯಲ್ಲಿ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಸಕ್ತ ದ್ವಿತೀಯ ವಿಜ್ಞಾನ ವಿಭಾಗದ ಅನಂತ್.ಎನ್.ಕೆ ಶೇಕಡಾ 99.6912 ಪರ್ಸೆಂಟೈಲ್ ಪಡೆದುಕೊಳ್ಳುವುದರ ಮೂಲಕ ಸಂಸ್ಥೆಯು ಅಭೂತಪೂರ್ವ ಸಾಧನೆಗೈದಿದೆ.

ಭೌತಶಾಸ್ತ್ರದಲ್ಲಿ 99.3968, ರಾಸಾಯನಶಾಸ್ತ್ರದಲ್ಲಿ 99.4211, ಗಣಿತಶಾಸ್ತ್ರ ದಲ್ಲಿ 99.3743 ಅಂಕಗಳನ್ನು ಪಡೆದುಕೊಂಡು ಒಟ್ಟಾರೆ 99.6912 ಪರ್ಸೆಂಟೈಲ್ ಅಂಕಗಳನ್ನು ಪಡೆದುಕೊಂಡಿರುವ ಅನಂತ್.ಎನ್.ಕೆ ಸಂಸ್ಥೆಗೆ ಕೀರ್ತಿ ತಂದಿದ್ದಾನೆ.

ಈ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಯೂ 593 ಅಂಕಗಳೊಂದಿಗೆ ರಾಜ್ಯಕ್ಕೆ ಏಳನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ, ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಬೋಧಕ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾಮೀಣ ಹಾಗೂ ಬಡ ಮಕ್ಕಳ ಶೈಕ್ಷಣಿಕ ಭರವಸೆಯ ತಾಣ ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು

0

ಗ್ರಾಮೀಣ ಹಾಗೂ ಬಡ ಮಕ್ಕಳ ಶೈಕ್ಷಣಿಕ ಭರವಸೆಯ ತಾಣ ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು

ಮನುಷ್ಯನ ವಿಕಾಸಕ್ಕೆ ಶಿಕ್ಷಣ ಮೂಲಸಾಧನ. ಇದನ್ನರಿತ ಆಧುನಿಕ ಮನುಷ್ಯ ಸಮಾಜ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ನೀಡುತ್ತಿದೆ. ತಂತ್ರಜ್ಞಾನಗಳ ಔನ್ನತಿಯ ಈ ಕಾಲಘಟ್ಟದಲ್ಲಿ ಹೊಸ ಹೊಸ ರೂಪದೊಂದಿಗೆ ಶಿಕ್ಷಣ ಸೇವೆ ನಡೆಯುತ್ತಿದೆ. ಇದೇ ಮಾದರಿಯ ಶಿಕ್ಷಣ ಪದ್ಧತಿಯ ಮೂಲಕ ಶಿಸ್ತು, ಗುಣಮಟ್ಟ ಹಾಗೂ ಜ್ಞಾನಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಂಡಿರುವ ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆ ವಿಭಿನ್ನವಾಗಿ ಕಾಣಿಸುತ್ತಿದೆ.

ಸಾಧನೆಗೆ ರಾಜ್ಯ ಹಾಗೂ ರಾಷ್ಟಮಟ್ಟದ ಪ್ರಶಸ್ತಿಗಳ ಗರಿಮೆ
ದಿವಂಗತ ರೆ.ಫಾ.ಎಫ್.ಪಿ.ಎಸ್ ಮೊನಿಸ್ ಇವರ ನೇತೃತ್ವದಲ್ಲಿ 1989ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಮತ್ತು ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ಮತ್ತು ‘ಜೀವನಕ್ಕಾಗಿ ಶಿಕ್ಷಣ’ ಎಂಬ ಧ್ಯೇಯದೊಂದಿಗೆ ಮುಂದುವರಿಯುತ್ತಾ ಬಂದಿದೆ.

ಇದು ಕ್ರೈಸ್ಟ್ ಕಿಂಗ್ ಚಾರಿಟೇಬಲ್ ಟ್ರಸ್ಟ್ನ ಆಶ್ರಯದಲ್ಲಿ ನಡೆಯುತ್ತಿದ್ದು ಅಡಳಿತ ಮಂಡಳಿ ಯಾವುದೇ ವೈಯಕ್ತಿಕ ಪ್ರತಿಫಲಾಪೇಕ್ಷೆಯಿಲ್ಲದೆ ಸಂಗ್ರಹವಾದ ಹಣವನ್ನು ಸಂಸ್ಥೆಯ ಬೆಳವಣಿಗೆಗೆ ವಿನಿಯೋಗಿಸುತ್ತಾ ಬಂದಿದೆ. ಪ್ರಸ್ತುತ ಸಮಾಜದ ಶಿಕ್ಷಣ ವ್ಯಾಪರೀಕರಣ ಮತ್ತು ವಾಣಿಜ್ಯೀಕರಣಕ್ಕೆ ವಿರುದ್ಧವಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ಎನ್ನುವ ಭಾವನೆಯೊಂದಿಗೆ ಶಿಕ್ಷಣ ಕೈಂಕರ್ಯವನ್ನು ಮುಂದುವರಿಸುತ್ತಿದೆ.

ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸರ್ವಧರ್ಮ ಸಹಬಾಳ್ವೆಯ ಊರಾದ ಕಾರ್ಕಳದಲ್ಲಿ ಆಧುನಿಕ ಶಿಕ್ಷಣ ಪದ್ಧತಿಯೊಂದಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು. ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗೆ ಅತ್ಯುತ್ಕೃಷ್ಟ ಗುಣಮಟ್ಟದ ಶಿಕ್ಷಣ ಇಲ್ಲಿ ಲಭ್ಯವಿದೆ.

ತನ್ನ ಈ ಶೈಕ್ಷಣಿಕ ವಿಶೇಷತೆಗೆ ಐ.ಎಸ್.ಒ 9001:2015 ಪ್ರಮಾಣ ಪತ್ರ ಹಾಗೂ ಕರ್ನಾಟಕದ ಅತ್ಯುತ್ತಮ ಸಾರ್ವಜನಿಕ ಶಿಕ್ಷಣ ಸಂಸ್ಥೆ, ಬೆಸ್ಟ್ ಸ್ಕೂಲ್ ಇನ್ ಕರ್ನಾಟಕ ಫಾರ್ ಟೀಚಿಂಗ್ 2009, ಮೋಸ್ಟ್ ಎಡ್‌ಮಯರ್ಡ್ ಪಬ್ಲಿಕ್ ಸ್ಕೂಲ್ ಇನ್ ಕರ್ನಾಟಕ, ಮೋಸ್ಟ್ ಪ್ರಾಮಿಸಿಂಗ್ ಹಾಗೂ ಟ್ರಸ್ಟೆಡ್ ಪದವಿಪೂರ್ವ ಕಾಲೇಜು-2024 ಮುಂತಾದ ಪ್ರಶಸ್ತಿಗಳ ಗರಿ ಈ ಸಂಸ್ಥೆಯ ಮುಡಿಗೇರಿದೆ. ಉಡುಪಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಈ ಸಂಸ್ಥೆ ಪ್ರಸಿದ್ಧಿ ಪಡೆದಿದೆ.

ಹಾಸ್ಟೆಲ್ ಸೌಲಭ್ಯ
ಎಂಟನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಹುಡಗರಿಗೆ ಹಾಗೂ ಹುಡುಗಿಯರಿಗೆ ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹುಡುಗಿಯರಿಗೆ ನೂತನ ಹಾಸ್ಟೆಲ್ ನಿರ್ಮಾಣಗೊಂಡಿದ್ದು ಈಗಾಗಲೇ ಕಾರ್ಯಾರಂಭ ಮಾಡಿದೆ.

ನೂತನ ಕಾಲೇಜು ಕಟ್ಟಡ
ಪದವಿಪೂರ್ವ ಕಾಲೇಜಿಗೆ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಇದು ಸುಸಜ್ಜಿತ ತರಗತಿ ಕೊಠಡಿಗಳು, ವಿಶಾಲ ಗ್ರಂಥಾಲಯ, ಆಧುನಿಕ ಸೌಲಭ್ಯಗಳನ್ನೊಳಗೊಂಡ ಲ್ಯಾಬ್‌ಗಳು, ಕಿರು ಚಿತ್ರಮಂದಿರ, ಎರಡು ಸಾವಿರ ಜನ ಆಸೀನರಾಗಬಹುದಾದ ಬೃಹತ್ ಸಭಾಂಗಣ, ಲಿಫ್ಟ್ ವ್ಯವಸ್ಥೆಗಳನ್ನು ಒಳಗೊಂಡಿದೆ.

ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ(ಪ್ರೀ ಕೆಜಿ, ಎಲ್‌ಕೆಜಿ, ಯುಕೆಜಿ), ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ತನಕದ ಶಿಕ್ಷಣ ಏಕ ಸೂರಿನಡಿ ಲಭ್ಯವಿದೆ. ಈಗಾಗಲೇ ಸುಮಾರು ೨೪೦೦ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿದ್ದು ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಎಸ್ ಕೋರ್ಸ್ಗಳು, ವಾಣಿಜ್ಯ ವಿಭಾಗದಲ್ಲಿ ಇಬಿಎಸಿ ಹಾಗೂ ಇಬಿಎಎಸ್, ಹೆಚ್‌ಇಬಿಎ ಕೋರ್ಸ್ಗಳನ್ನು ಅಳವಡಿಸಲಾಗಿದೆ.

ನಿರಂತರ ಸಿಇಟಿ, ನೀಟ್, ಜೆಇಇ ಹಾಗೂ ಸಿಎ, ಸಿಎಸ್ ತರಬೇತಿ
ನುರಿತ ಹಾಗೂ ಅನುಭವಸ್ಥ ಉಪನ್ಯಾಸಕ ತಂಡದಿಂದ ಸಿ.ಇ.ಟಿ, ನೀಟ್, ಜೆ.ಇ.ಇ ತರಗತಿಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಪ್ರತೀ ವಾರ ಅಣಕು ಸಿಇಟಿ, ನೀಟ್ ಪರೀಕ್ಷೆ ನಡೆಸಲಾಗುತ್ತದೆ. ದೇಶದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಸಿ.ಇ.ಟಿ/ನೀಟ್ ಕಲಿಕಾ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಸಂಸ್ಥೆಯು ತನ್ನದೇ ಆದ ಪುಸ್ತಕಗಳನ್ನು ಹೊರತಂದಿದ್ದು ಕಡಿಮೆ ಬೆಲೆಯಲ್ಲಿ ಮಕ್ಕಳಿಗೆ ಒದಗಿಸಲಾಗುತ್ತಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ, ಸಿ.ಎಸ್ ತರಬೇತಿ ನೀಡಲಾಗುತ್ತಿದೆ. ಈ ಸಂಸ್ಥೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿAಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಫಾರ್ಮಸಿ, ಸಿ.ಎ, ಸಿಎಸ್ ಮುಂತಾದ ಪ್ರೊಫೆಸನಲ್ ಕೋರ್ಸ್ ಪೂರೈಸಿ ಉನ್ನತ ಸ್ಥಾನದಲ್ಲಿದ್ದಾರೆ.

ಕೌಶಲ್ಯಾಭಿವೃದ್ಧಿ ಹಾಗೂ ಫೌಂಢೇಷನ್ ಕೋರ್ಸ್
ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ಪೌಂಡೇಷನ್ ಕೋರ್ಸ್ ನಡೆಸಲಾಗುತ್ತಿದೆ. ಮಕ್ಕಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಭವಿಷ್ಯದ ನೀಟ್, ಜೆ.ಇ.ಇ, ಸಿ.ಇ.ಟಿ, ಸಿ.ಎ, ಎನ್‌ಡಿಎ, ಕೆವಿಪಿವೈ, ಎನ್‌ಟಿಎಸ್‌ಇ, ಐ.ಎ.ಎಸ್, ಐ.ಪಿ.ಎಸ್ ಹಾಗೂ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರುಗೊಳಿಸುವುದು ಈ ಕೋರ್ಸ್ನ ಉದ್ದೇಶ. ಕಾರ್ಕಳದ ಪರಿಸರದಲ್ಲಿ ಶಿಕ್ಷಣ ಸಂಸ್ಥೆಯೊAದು ಇಂತಹ ಸಾಹಸವನ್ನು ಆರಂಭಿಸಿರುವುದು ಮೊತ್ತ ಮೊದಲನೆಯದಾಗಿದೆ.

ಸತತವಾಗಿ 100% ಫಲಿತಾಂಶ ಪಡೆಯುತ್ತಿರುವ ಸಂಸ್ಥೆ
ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಕ್ವಾಲಿಟಿ ರಿಸಲ್ಟ್ ಇಂಡೆಕ್ಸ್ನಲ್ಲಿ ನಿರಂತರವಾಗಿ ಕಾರ್ಕಳ ತಾಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿರುವುದು ಸಂಸ್ಥೆಯ ವಿಶೇಷತೆಯಾಗಿದೆ. ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಒಟ್ಟು 9 ವಿದ್ಯಾರ್ಥಿಗಳು ಆರು ನೂರಕ್ಕಿಂತ ಹೆಚ್ಚಿನ ಅಂಕ ದಾಖಲಿಸಿದ್ದಾರೆ.2021-22 ಸಾಲಿನಲ್ಲಿ ಓರ್ವ ವಿದ್ಯಾರ್ಥಿನಿ 625 ರಲ್ಲಿ 625 ಅಂಕಗಳನ್ನು ಪಡೆದು ಕಾರ್ಕಳ ತಾಲೂಕಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪೂರ್ಣಾಂಕಗಳನ್ನು ಪಡೆದ ದಾಖಲೆಯನ್ನು ಈ ಮೂಲಕ ಕ್ರೈಸ್ಟ್ ಕಿಂಗ್ ತನ್ನದಾಗಿಸಿಕೊಂಡಿದೆ. ಪದವಿಪೂರ್ವ ವಿಭಾಗದಲ್ಲಿ ೨೦೨೩-೨೪ ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಅಗ್ರ ಹತ್ತರೊಳಗೆ ಹತ್ತ ರ‍್ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿದ್ದಲ್ಲದೆ 175 ವಿದ್ಯಾರ್ಥಿಗಳು ವಿಶಿಷ್ಟಶ್ರೇಣಿಯನ್ನು ಪಡೆದುಕೊಂಡಿದ್ದರು. ಇದರ ಜೊತೆಗೆ ಪರೀಕ್ಷೆ ಬರೆದ 234 ವಿದ್ಯಾರ್ಥಿಗಳು ಕೂಡಾ ಪ್ರಥಮ ದರ್ಜೆಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದರು.

ಪ್ರಸಕ್ತ 202425 ನೇ ಸಾಲಿನಲ್ಲಿಯೂ ರಾಜ್ಯಮಟ್ಟದಲ್ಲಿ ಅಗ್ರ ಹತ್ತರೊಳಗೆ ನಾಲ್ಕು ವಿದ್ಯಾರ್ಥಿಗಳು ರ‍್ಯಾಂಕ್ ಪಡದುಕೊಂಡಿದ್ದಾರೆ, ವಾಣಿಜ್ಯ ವಿಭಾಗದಲ್ಲಿ ಸಂಸ್ಥೆಯು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಒಟ್ಟು 177 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದುಕೊಳ್ಳುವುದರ ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಗಿಂತ ಮೇಲಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಜೆಇಇಯಲ್ಲಿ ಟಾಪರ್ ವಿದ್ಯಾರ್ಥಿ 9901 ಪರ್ಸಂಟೈಲ್ ಅಂಕಗಳನ್ನು ಪಡೆದುಕೊಂಡಿದ್ದಾನೆ. ಇಬ್ಬರು ವಿದ್ಯಾರ್ಥಿಗಳು ಸಿಎ ಫೌಂಡೇಷನ್ ಹಾಗೂ ನಾಲ್ಕು ವಿದ್ಯಾರ್ಥಿಗಳು ಸಿಎಸ್‌ಇಇಟಿ ಯನ್ನು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ.
ಉಚಿತ ಮತ್ತು ಶುಲ್ಕ ರಿಯಾಯಿತಿಯ ಶಿಕ್ಷಣ

ಈಗಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಗಗನಕುಸುಮವಾಗಿದೆ. ಇದನ್ನು ಅರಿತ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ.

ಹತ್ತನೇ ತರಗತಿಯಲ್ಲಿ 97 ಶೇಖಡಕ್ಕಿಂತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ಸಂಪೂರ್ಣ ರಿಯಾಯಿತಿ ಸಿಗಲಿದೆ. ಅಲ್ಲದೇ ಹತ್ತನೇ ತರಗತಿಯಲ್ಲಿ 90 ರಿಂದ 96 ಶೇಖಡದೊಳಗೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ 50% ರಿಯಾಯಿತಿ ನೀಡಲಾಗುತ್ತದೆ. ಇದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ 50% ಶುಲ್ಕ ವಿನಾಯಿತಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ. 202425 ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಒಟ್ಟಾರೆಯಾಗಿ ಸುಮಾರು 38 ಲಕ್ಷದ 24 ಸಾವಿರ ರೂಪಾಯಿಗಳ ಶುಲ್ಕ ಮನ್ನಾ ಮಾಡಲಾಗಿದೆ.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾರಮ್ಯ
ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆ ಪುಟಿದೇಳುವಂತೆ ಮಾಡಿ ನಾಯಕತ್ವ ಗುಣ ಬೆಳೆಸಲು ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆ ಸದಾ ಒಂದಿಲ್ಲೊ೦ದು ಕಾರ್ಯಕ್ರಮ ಸಂಯೋಜಿಸುತ್ತಾ ಬರುತ್ತಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಕೌಶಲ್ಯವನ್ನು ವೃದ್ಧಿಸುವ ದೃಷ್ಠಿಯಿಂದ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ನಿರಂತರ ಉಪನ್ಯಾಸ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತಿದೆ. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ಮಕ್ಕಳಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಕಬ್, ಬುಲ್ ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್, ರೋರ‍್ಸ್ ಮತ್ತು ರೇಂರ‍್ಸ್, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ವಿಜ್ಞಾನ ಸಂಘ, ವಾಣಿಜ್ಯ ಸಂಘ, ವಿದ್ಯಾರ್ಥಿ ಸಂಘ ಇತ್ಯಾದಿ ಸಂಘಗಳ ಮೂಲಕ ಮಕ್ಕಳ ದೈಹಿಕ, ಬೌದ್ಧಿಕ ವಿಕಾಸಕ್ಕೆ ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ತರಗತಿವಾರು ಚಟುವಟಿಕೆಗಳ ಮೂಲಕ ಮಕ್ಕಳ ಬೌದ್ಧಿಕ ವಿಕಸನಕ್ಕೆ ಒತ್ತು ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಇಲ್ಲಿಗೆ ಬಂದು ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಾರೆ. ಆರನೇ ತರಗತಿಯಿಂದ ಪದವಿ ಪೂರ್ವದವರೆಗಿನ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಕೈಗಾರಿಕೆ, ಕೃಷಿ, ಹೈನುಗಾರಿಕೆ, ಆಶ್ರಮ, ವಿಶೇಷ ಶಾಲೆ, ವಿಜ್ಞಾನ ಸಂಶೋಧನಾಲಯಗಳು ಮುಂತಾದ ಕ್ಷೇತ್ರಗಳಿಗೆ ಭೇಟಿ ಕಾರ್ಯಕ್ರಮ ನಡೆಯುತ್ತದೆ. ವಿದ್ಯಾರ್ಥಿಗಳಿಗೆ ಚೆಂಡೆ, ಬ್ಯಾಂಡ್, ಯಕ್ಷಗಾನ, ಭರತನಾಟ್ಯ, ಕರಾಟೆ, ಚೆಸ್, ಶಾಸ್ತ್ರೀಯ ಸಂಗೀತ ಮುಂತಾದ ತರಬೇತಿಗಳನ್ನು ನೀಡಲಾಗುತ್ತಿದೆ. ಇವುಗಳಿಂದಾಗಿ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಕ್ರೀಡೆ, ಸಾಂಸಕೃತಿಕ, ವೈಜ್ಞಾನಿಕ ಸಂಶೋಧನಾ ಕ್ಷೇತ್ರಗಳನ್ನು ಪಾರಮ್ಯ ಸಾಧಿಸುತ್ತಿದ್ದಾರೆ. ಈ ಸಾಲಿನಲ್ಲಿ ಚೆಸ್, ಶಟಲ್ ಬ್ಯಾಡ್ಮಿಂಟನ್, ಕುಸ್ತಿ ಹೀಗೆ ವಿವಿಧ ಸ್ಪರ್ಧೆಗಳಲ್ಲಿ 6 ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಹಾಗೂ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ 11, ಮೈಸೂರು ವಿಭಾಗ ಮಟ್ಟದಲ್ಲಿ19 ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಕಿಚನ್ ಲ್ಯಾಬ್ ಹಾಗೂ ಗ್ರೂಮಿಂಗ್ ತರಗತಿ
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆಹಾರ ಸೇವನೆಯ ಶಿಸ್ತು ಮತ್ತು ಕ್ರಮಬದ್ಧತೆ ಕುರಿತಾದ ಜ್ಞಾನ ಬೆಳೆಸಲು ಕಿಚನ್ ಲ್ಯಾಬ್ ಎಂಬ ನೂತನ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತದೆ. ಇದರ ಜೊತೆಗೆ ಸಾರ್ವಜನಿಕ ವರ್ತನೆ, ಗುರುಹಿರಿಯರ ಜೊತೆ ನಡವಳಿಕೆ, ವಿವಿಧ ಧಾರ್ಮಿಕ ಆಚರಣಾ ನಡವಳಿಕೆಗಳು, ಮಾಣವೀಯ ಮೌಲ್ಯಗಳು, ತಂದೆ ತಾಯಿ ಹಾಗೂ ಕೌಟುಂಬಿಕ ಪರಿಸರದ ಮಹತ್ವಗಳ ಅರಿವನ್ನು ಮೂಡಿಸಲು ಗ್ರೂಮಿಂಗ್ ತರಗತಿ ಎಂಬ ನೂತನ ಮೌಲ್ಯ ಬೋಧನಾ ತರಗತಿಗಳನ್ನು ಈ ವರ್ಷದಿಂದ ಆರಂಭಿಸಲಾಗುತ್ತಿದೆ. ವಿಶೇಷವಾಗಿ ಇದರ ಸಿಲೆಬಸ್ ಅನ್ನು ಕ್ರೆöÊಸ್ಟ್ಕಿಂಗ್ ವಿದ್ಯಾ ಸಂಸ್ಥೆಯೇ ತಯಾರಿಸಿದೆ.

ಸೇವಾ ವೈಶಿಷ್ಟ್ಯತೆ
ನಗರ ಪ್ರದೇಶದಲ್ಲಿದ್ದರೂ ಗ್ರಾಮೀಣ ಸೊಗಡನ್ನು ಬಿಡದೆ, ಸಾಂಪ್ರದಾಯಿಕ ಪದ್ಧತಿಯೊಂದಿಗೆ ಆಧುನಿಕ ವಿಧಾನಗಳ ಮೂಲಕ ಶಿಕ್ಷಣ ಸೇವೆ ನೀಡುತ್ತಿರುವ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು ವಿಭಿನ್ನವಾಗಿ ಕಾರ್ಯಾಚರಿಸುತ್ತಿವೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಆನ್‌ಲೈನ್ ಮುಖಾಂತರ ನಿರಂತರ ತರಗತಿಗಳನ್ನು ಮಾಡಿ ಆ ಮೂಲಕ ಮಕ್ಕಳು ಶಿಕ್ಷಣದಿಂದ ವಿಮುಖರಾಗದ ಹಾಗೇ ನೋಡಿಕೊಳ್ಳಲಾಗಿದೆ. ಇಲ್ಲಿ ನೀಡಿರುವ ಆನ್‌ಲೈನ್ ತರಗತಿಗಳು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳ ಮತ್ತು ವಿದ್ಯಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿವೆ. ಒಟ್ಟಿನಲ್ಲಿ ಶಿಕ್ಷಣದ ವ್ಯಾಪಾರೀಕರಣದ ನಡುವೆ ಈ ಶಿಕ್ಷಣ ಸಂಸ್ಥೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಈ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಒದಗಿಸುತ್ತಿದೆ. ಈ ರೀತಿಯ ತರಬೇತಿಗಳಿಂದ ಈ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ – ಸಾಹಿತ್ಯಿಕ ಸ್ಪರ್ಧೆಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುತಿದ್ದಾರೆ.

ಕಾರ್ಕಳ:ಎಂ.ಪಿ.ಎಂ. ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

0

ಕಾರ್ಕಳ:ಎಂ.ಪಿ.ಎಂ. ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

ಕಾರ್ಕಳ:ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇಲ್ಲಿನ 2024 25 ನೇ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾಲೇಜಿನ
ಆವರಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ, ಕರ್ನಾಟಕ ಸರಕಾರದ ಮಾಜಿ ಸಚಿವ, ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುನಿಲ್ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಎಂಪಿಎಂ ಕಾಲೇಜಿನಲ್ಲಿಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಅತ್ಯಂತ ಯಶಸ್ಸು ಸಿಕ್ಕಿದ್ದು, ಆ ಪರಂಪರೆಯನ್ನು ವಿದ್ಯಾರ್ಥಿಗಳು ಮುಂದುವರಿಸಿಕೊಂಡು ಹೋಗುವ ಜೊತೆಗೆ ಸಂಸ್ಥೆಯಲ್ಲಿ ಒಬ್ಬರನ್ನೊಬ್ಬರು ಅರಿತು ಬಾಳುವಂತಾಗಲಿ.ಯುವಶಕ್ತಿ ಒಗ್ಗಟ್ಟಿನಿಂದ ಜಗತ್ತಿನ ಸವಾಲು ಎದುರಿಸುವಲ್ಲಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ
ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಲು ಒಂದು ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪಾತ್ರವಹಿಸಲು, ಈ ಕಾಲೇಜಿನ ಜೀವನ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ರವಿರಾಜ್ ಶೆಟ್ಟಿ, ಕನ್ನಡ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು,ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಮಾತನಾಡಿ ಕಾಲೇಜಿನ ಯಶಸ್ಸಿಗೆ ಅದರ ಆಕಾರ ಮತ್ತು ವಿಸ್ತಾರಗಳಿಗಿಂತ ಅಲ್ಲಿನ ಐದು ಸಂಪತ್ತುಗಳು ಅಗತ್ಯವಿದ್ದು ಅವುಗಳೆಂದರೆ ಕರ್ತವ್ಯ ನಿರತ ಸಿಬ್ಬಂದಿ, ದೂರದರ್ಶಿತ್ವದ ಪ್ರಾಂಶುಪಾಲರು, ಶಿಸ್ತಿನ ವಿದ್ಯಾರ್ಥಿಗಳು, ಕಾಳಜಿ ಉಳ್ಳ ಪಾಲಕರು, ಕಾಲೇಜಿನ ಸಾಂಸ್ಕೃತಿಕ ರೂವಾರಿಗಳಾದ ಹಳೆವಿದ್ಯಾರ್ಥಿಗಳು ಇರಬೇಕು, ಈ ಎಲ್ಲಾ ಅಂಶಗಳು ಈ ಕಾಲೇಜಿನಲ್ಲಿ ಮೇಳೈಸಿ ಯಶಸ್ವಿಗೆ ಕಾರಣವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ ಕ್ಷೇತ್ರದ ಶಾಸಕರ ಮಾರ್ಗದರ್ಶನ ಹಾಗು ಎಲ್ಲರ ಸಹಕಾರದೊಂದಿಗೆ ಕಾಲೇಜು ಇನ್ನಷ್ಟು ಹೊಸತನ ಕಂಡುಕೊಂಡುಸಾಧನೆಯತ್ತ ಸಾಗಲಿದೆ ಎಂಬ ಮಾತುಗಳನ್ನಾಡಿ, ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವದ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ 2024ರಲ್ಲಿ ಕಾಲೇಜಿನಿಂದ ಬೇರೆಡೆಗೆ ವರ್ಗಾವಣೆಗೊಂಡ ಕಾಲೇಜಿನ ಅಧ್ಯಾಪಕರುಗಳಾದ ಡಾ.ವಿದ್ಯಾಧರ ಹೆಗ್ಡೆ, ಡಾ. ಗಣೇಶ್, ಶ್ರೀ ವೆಂಕಟೇಶ್, ಹಾಗೂ ಕಾಲೇಜಿನ ಯಕ್ಷಗಾನ ಶಿಕ್ಷಕರಾದ ಶ್ರೀ ಮಹಾವೀರ ಪಾಂಡಿಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು,ಪೋಷಕರು, ಪೂರ್ವ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು.ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಮೈತ್ರಿ ಬಿ. ವಂದನಾರ್ಪಣೆ ನಿರ್ವಹಿಸಿದರು.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ಪ್ರಸನ್ನ ಎಂ ಎಸ್ ಅಧಿಕಾರ ಸ್ವೀಕಾರ

0

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ಪ್ರಸನ್ನ ಎಂ ಎಸ್ ಅಧಿಕಾರ ಸ್ವೀಕಾರ

ಕಾರ್ಕಳ ಗ್ರಾಮಾಂತರ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿದ್ದ ದಿಲೀಪ್ ವರ್ಗಾವಣೆಗೊಂಡಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ಪ್ರಸನ್ನ ಎಂ ಎಸ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಕಾರ್ಕಳ ನಗರ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದರು.ಇಂದು ಕಾರ್ಕಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಅವರಿಗೆ ಈ ಬಾರಿ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿತ್ತು.

ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾದ ತಾಯಿ- ಮಗ

0

ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾದ ತಾಯಿ- ಮಗ

2025 ರ ಮಾರ್ಚ್ ನಲ್ಲಿ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶಿರ್ವ ಸಾಂತೂರ್ ನಿವಾಸಿ ಶ್ರೀಮತಿ ರೋಸ್ಲಿನ್ ಜೇಸಿಂತ ಡಿಸೋಜಾ ಹಾಗೂ ಅವರ ಪುತ್ರ ಜೇಷ್ಠನ್ ಡಿಸೋಜಾ ಇವರು ಜೊತೆಯಾಗಿ ಪರೀಕ್ಷೆ ಬರೆದು ವಿಶಿಷ್ಟವಾಗಿ ಪಾಸಾಗಿರುತ್ತಾರೆ.

ಶ್ರೀಮತಿ ರೋಸ್ಲಿನ್ ಜೇಸಿಂತ ಇವರು ಕಾಪು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರ್ಟ್ಸ್ ವಿಭಾಗದಲ್ಲಿ ಖಾಸಗಿ ಅಭ್ಯರ್ಥಿ ಯಾಗಿ ನೋಂದಾವಣೆಗೊಂಡು ಮೈ – ಟೆಕ್ ಟ್ಯೂಟೋ ರಿಯಲ್ ಕಾಲೇಜು ಶಿರ್ವ ಇಲ್ಲಿ ಟ್ಯೂಷನ್ ಪಡೆದು 600 ಅಂಕಗಳಲ್ಲಿ 517 ಅಂಕ ಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.ಇವರ ಪುತ್ರ ಜೇಷ್ಠನ್ ಡಿಸೋಜಾ ಇವರು ನಿಟ್ಟೆ ಕಾಲೇಜು ನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವೀತಿಯ ಶ್ರೇಣಿಯಲ್ಲಿ ಪಾಸಾಗಿ ತಾಯಿ ಮಗ ವಿಶಿಷ್ಟ ಸಾಧನೆ ಮಾಡಿರುತ್ತಾರೆ.

ಶ್ರೀಮತಿ ಜೇಸಿಂತ ಡಿಸೋಜಾ ಇವರು ಎಸ್. ಎಸ್. ಎಲ್. ಸಿ ಪರೀಕ್ಷೆ ಬರೆದು ಬರೋಬ್ಬರಿ 25 ವರ್ಷಗಳ ನಂತರ ಪಿ ಯು ಸಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ 100 ಅಂಕ ಗಳಲ್ಲಿ 99 ಅಂಕಗಳನ್ನು ಪಡೆದು ವಿಶಿಷ್ಟ ದಾಖಲಯೊಂದಿಗೆ ಪಾಸಾಗಿರುತ್ತಾರೆ.

ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ ಜೇಸಿಂತ ಡಿಸೋಜಾ ಇವರು ಪದೋನ್ನತಿ ಗಾಗಿ ಪರೀಕ್ಷೆ ಬರೆಯಬೇಕಾದ ಸಂದರ್ಭ ಒದಗಿ ಬಂದಿದ್ದು ಇದೀಗ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಸಾದಿಸುವ ಛಲವೊಂದಿದ್ದರೆ ಯಶಸ್ಸನ್ನು ಪಡೆಯಬಹುದು ಮೈಟೆಕ್ ಸಂಸ್ಥೆಯ ಉದಯ ಆಚಾರ್ಯ ಮೆಚ್ಚುಗೆ ಸೂಚಿಸಿದ್ದಾರೆ.ಇವರ ಈ ಅಮೋಘ ಸಾಧನೆ ತುಂಬಾ ಸಂತೋಷ ತಂದಿದೆ ಎಂದು ಕನ್ನಡ ವಿಭಾಗದ ಶಿಕ್ಷಕಿ ರೇಷ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಯನ್ಸ್ ಜಿಲ್ಲೆ 317c ಯ ಪ್ರಾಂತ್ಯ 3ರ ಪ್ರಾಂತಿಯ ಅಧ್ಯಕ್ಷರಾಗಿ ಗಿರೀಶ್ ರಾವ್ ಆಯ್ಕೆ

0

ಲಯನ್ಸ್ ಜಿಲ್ಲೆ 317c ಯ ಪ್ರಾಂತ್ಯ 3ರ ಪ್ರಾಂತಿಯ ಅಧ್ಯಕ್ಷರಾಗಿ ಗಿರೀಶ್ ರಾವ್ ಆಯ್ಕೆ

2025-26 ನೇ ಸಾಲಿನ ಲಯನ್ಸ್ ಜಿಲ್ಲೆ, 317 ಸಿ ಯ ಪ್ರಾಂತ್ಯ 3 ರ ಅಧ್ಯಕ್ಷರಾಗಿ ಲಯನ್ಸ್ ಗಿರೀಶ್ ರಾವ್ ರವರನ್ನು ನಿಯೋಜಿತ ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್ ರವರು ಆಯ್ಕೆ ಮಾಡಿ ಘೋಷಿಸಿದ್ದಾರೆ.

ಲಯನ್ ಗಿರೀಶ್ ರಾವ್ ಇವರು ಮೆಸ್ಕಾಂ ಕಾರ್ಕಳ ವಿಭಾಗದ ಲೆಕ್ಕಾಧಿಕಾರಿಯಾಗಿ. ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೆಸರರಾಗಿ, ಛತ್ರಪತಿ ಫೌಂಡೇಶನ್ ಇದರ ಅಧ್ಯಕ್ಷರಾಗಿ, ಕ್ಷತ್ರಿಯ ಮರಾಠ ಸಮಾಜ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.

ಭಾರತೀಯ ಜೆಸಿಸ್ ನಲ್ಲಿ ಸುಮಾರು 32 ವರ್ಷಗಳ ಕಾಲ ಸುದೀರ್ಘ ಅನುಭವ ಹೊಂದಿರುವ ಇವರು,ಅಧ್ಯಕ್ಷರಾಗಿ,ವಲಯ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.ಮೂರು ರಾಷ್ಟ್ರೀಯ ವೈಯಕ್ತಿಕ ಪ್ರಶಸ್ತಿಯನ್ನು ಪಡೆದ ಹಿರಿಮೆ ಇವರದು.ಲಯನ್ಸ್ ಸಂಸ್ಥೆಯಲ್ಲಿ ಕ್ಲಬ್ ನ ಅಧ್ಯಕ್ಷರಾಗಿ ವಲಯಧ್ಯಕ್ಷನಾಗಿ ಜಿಲ್ಲೆಯ ಸಂಪುಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.

ಕ್ರೈಸ್ಟ್ ಕಿಂಗ್:ದ್ವಿತೀಯ ಪಿಯುಸಿಯಲ್ಲಿ ಅಭೂತಪೂರ್ವ ಸಾಧನೆ

0

ಕ್ರೈಸ್ಟ್ ಕಿಂಗ್:ದ್ವಿತೀಯ ಪಿಯುಸಿಯಲ್ಲಿ ಅಭೂತಪೂರ್ವ ಸಾಧನೆ

ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಶೆಟ್ಟಿ ೫೯೫ ಅಂಕಗಳೊAದಿಗೆ ಜಿಲ್ಲೆಗೆ ಪ್ರಥಮ ರ‍್ಯಾಂಕ್
177 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ
ಎರಡೂ ವಿಭಾಗಗಳಲ್ಲಿ ರಾಜ್ಯಮಟ್ಟದಲ್ಲಿ ಒಟ್ಟು ನಾಲ್ಕು ರ‍್ಯಾಂಕ್
ವಿಜ್ಞಾನ ವಿಭಾಗದಲ್ಲಿ ಅನಂತ್ ಎನ್ ಕೆ ಏಳನೇ ರ‍್ಯಾಂಕ್ ಹಾಗೂ ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಶೆಟ್ಟಿ ಐದನೇ ರ‍್ಯಾಂಕ್, ಚರಣ್‌ರಾಜ್ ಎಂಟನೇ ರ‍್ಯಾಂಕ್, ನಾರಾಯಣಿ ಕಿಣಿ ಹತ್ತನೇ ರ‍್ಯಾಂಕ್,
ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಗಿಂತ ಮೇಲೆಯೇ ಉತ್ತೀರ್ಣಗೊಳ್ಳುವುದರ ಮೂಲಕ ವಿಶಿಷ್ಟ ಸಾಧನೆ

ಕಾರ್ಕಳ: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಉತ್ತಮ ಫಲಿತಾಂಶದೊAದಿಗೆ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 95 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸತತ 17ನೇ ಬಾರಿಗೆ 100ಶೇಕಡಾ ಫಲಿತಾಂಶ ಪಡೆದುಕೊಂಡಿದೆ.

 

ದಾಖಲಾತಿಗೆ ಅಂಕಗಳ ಮಿತಿ ನಿಗದಿಪಡಿಸಿಕೊಳ್ಳದೆ ಎಲ್ಲಾ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿಯೂ ಅತ್ಯುತ್ತಮ ಫಲಿತಾಂಶ ದಾಖಲಿಸಿರುವುದು ಗಮನಾರ್ಹ ಸಾಧನೆಯಾಗಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 179 ವಿದ್ಯಾಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 178 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

 

ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಎಸ್ ಶೆಟ್ಟಿ 595 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಕ್ಕೆ ಐದನೇ ರ‍್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಜೊತೆಗೆ ಚರಣ್ ರಾಜ್ 592 ಅಂಕ ಪಡೆದುಕೊಂಡು ಎಂಟನೇ ರ‍್ಯಾಂಕ್, ನಾರಾಯಣಿ ಕಿಣಿ 590 ಅಂಕಗಳನ್ನು ಪಡೆದುಕೊಂಡು ಹತ್ತನೇ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

 

ವಿಜ್ಞಾನ ವಿಭಾಗದಲ್ಲಿ ಅನಂತ್ ಎನ್.ಕೆ 593 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಮಟ್ಟದಲ್ಲಿ ಏಳನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. ಜೊತೆಗೆ ಸಂಹಿತ್ ಎಸ್ ಆಚಾರ್ಯ, ಶ್ರೀಯಾ ಹಾಗೂ ರಶ್ಮೀ ೫೮೯ ಅಂಕಗಳನ್ನು ಪಡೆದುಕೊಂಡು ಜಿಲ್ಲೆಗೆ ಎಂಟನೇ ರ‍್ಯಾಂಕ್ ಹಾಗೂ ಸಂಸ್ಥೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

 

ವಾಣಿಜ್ಯ ವಿಭಾಗದಲ್ಲಿ 73 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 25 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ 28 ವಿದ್ಯಾರ್ಥಿಗಳು 90 ರಿಂದ 95% ಅಂಕಗಳನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 104 ವಿದ್ಯಾರ್ಥಿಗಳು 85%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ 74ವಿದ್ಯಾಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 17ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ 50 ವಿದ್ಯಾರ್ಥಿಗಳು 90 ರಿಂದ 95% ಅಂಕಗಳನ್ನು ಪಡೆದುಕೊಂಡಿದ್ದಾರೆ.

ಯಾವುದೇ ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡಿಲ್ಲ. ವಾಣಿಜ್ಯ ವಿಭಾಗದಲ್ಲಿ ರಾನಿಯಾ ರೋಷನ್ (586), ತನುಶ್ರೀ ಎಲ್ ಪಿ (586), ಡೇರಿಲ್ ವಿನೋಲ್ ಮೋರಸ್(585), ಪವನ್ ಎಸ್ ಪೂಜಾರಿ(585), ಶ್ರೇಯಸ್ ಬಿ ಆಚಾರ್ಯ(584), ಮೊಹಮ್ಮದ್ ಬಶೀರ್ (583), ಜೋಶ್ವಾ ಹೆರಾಲ್ಡ್ ಫೆರ್ನಾಂಡಿಸ್ (582), ಶದಾ ಇರ್ಷಾದ್ (582), ಅನ್ಸಿಫಾ ಬಾನು(580), ಶ್ರಾವ್ಯ(579), ಪ್ರೀತಿ ಶೆಟ್ಟಿ (577), ಎರ್ವಿನ್ ಡಿ’ಮೆಲ್ಲೊ(577), ಜೆಸ್ಸಿಕಾ ಲಿಯೋರಾ ಮಿನೇಜಸ್ (576), ಫಾತಿಮಾ ಝುಹಾ (575), ಸುವಿಧಾ (575), ಮನಿಟಾ ಮೈಕಲ್ (574), ಹನಿ ವೆನ್ಯಾ(573), ನತಾಶ ಪಿಂಟೊ(573), ಶ್ರವಣ್ (573), ವೆನ್ಸನ್ ಜಾಯ್ವಿನ್ ಮೆನೆಜಸ್ (573), ಫೈಝಾ ಆಯಿಷಾ (572), ಅನ್ಶ್ ಕುಮಾರ್ (571) ಶೇಕಡಾ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅಲ್ವೀನಿಯಾ ಡೆಸ (582), ಅಮೂಲ್ಯ (581), ಲಿಯಾನಾ ನೇತಲ್(580), ಹನ್ಸಿಯಾ ಅಲ್ಮೇಡ (579), ಅನಘ ವಿ (578), ನವೀದ್ ಝಾಹಿದ್ ಹುಸೇನ್ (578), ಸ್ನೇಹಲ್ ಪಿಂಟೊ (577), ಸಂಜನಾ ಎಸ್ ಪಾಟ್ಕರ್ (574), ಶಾನ್ವಿ ಬಲ್ಲಾಳ್ (573), ಸೃಜನ್ ಶೆಟ್ಟಿ(573), ದಿವ್ಯಾ ಡಿಸೋಜ (571), ವಿಲ್ಶಾ ಡಿಸೋಜ (570), ನಿಹಾಲ್ ವೈ ಆಚಾರ್ಯ(570) ಶೇಕಡಾ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.

 

 

1. Ananth N K, 593, 98.83%
2. Samhith S Acharya, 589, 98.17%
2. Shriya, 589, 98.17%
3. Alvinia Dsa, 583, 97.17%
4. Amoolya, 581, 96.83%
5. Liana Nathal Rodrigues, 580, 96.67%
6. Hancia Almeda, 579, 96.50%
7. Anagha V, 578, 96.33%
7. Naveed Zahid Hussain, 578, 96.33%
8. Snehal Pinto, 577, 96.17%
9. Sanjana S Patkar, 574, 95.67%
10. Shanvi Ballal, 573, 95.50%
10. Srujan Shetty, 573, 95.50%
11. Divya Dsouza, 571, 95.17%
12. Wilsha Dsouza, 570, 95%
12.Nihal Y Acharya, 570, 95%

 

ಕಾಮರ್ಸ್ ವಿಭಾಗ

 

 

1. Sudhiksha S Shetty, 595, 99.17%
1. Sudhiksha S Shetty, 595, 99.17%

 

2. Charanraj, 592, 98.67% (1)

 

3. Narayani G Kini, 590, 98.33%
3. Narayani G Kini, 590, 98.33%
4. Rania Roshan, 586, 97.67%
4. Rania Roshan, 586, 97.67%
5. Thanushree L P, 586, 97.67%
6. Pawan S Poojary, 585, 97.50%
6. Darryl Vinol Moras, 585, 97.50%
7. Shreyas B Acharya, 584, 97.33%
8. Joshwa Herald Fernandes, 582, 97%
8. Mohammed Basheer, 583(97%)
9. Ansifa Banu, 580, 96.67%
8. Shadha Irshad, 582, 97%
10.Shravya, 579, 96.50%
11. Ervin D Mello, 577, 96.17%
11. Preethi Shetty, 577, 96.17%
13. Fathima zuha, 575, 95.83%
12. Jessica Leora Menezes, 576, 96%
14. Manitta Michael, 574, 95.67%
14. Suvidha, 574, 95.67%
15. Hani Venya, 573, 95.50%
15. Nathsha Pinto, 573, 95.50%
15. Shravan, 573, 95.50%
15. Wenson Joyvin Menezes, 573, 95.50%
16. Faiza Ayesha, 572, 95.33%
17. Ansh Kumar, 571, 95.17%

 

ಮುಡಾರು:ಭಾರೀ ಮಳೆಯ ಕಾರಣ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಾಳೆಗೆ (ಏ.13) ಮುಂದೂಡಿಕೆ

0

ಮುಡಾರು:ಭಾರೀ ಮಳೆಯ ಕಾರಣ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಾಳೆಗೆ (ಏ.13) ಮುಂದೂಡಿಕೆ

ಮುಡಾರು:ಹಳೆ ವಿದ್ಯಾರ್ಥಿ ಸಂಘ (ರಿ.) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು ಇದರ ಸುವರ್ಣ ಮಹೋತ್ಸವ ಸಮಾರಂಭದ ಇಂದಿನ ಕಾರ್ಯಕ್ರಮವನ್ನು ನಾಳೆಗೆ (ಏಪ್ರಿಲ್ 13ಭಾನುವಾರ) ಮುಂದೂಡಲಾಗಿದೆ.

13.04.2025 ಭಾನುವಾರ ರಾತ್ರಿ 7.30 ರಿಂದ ಸಭಾ ಕಾರ್ಯಕಮ,ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ

ಭಾರೀ ಮಳೆಯ ಕಾರಣದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು,ನಾಳೆ ಚಪ್ಪರ ವ್ಯವಸ್ಥೆಯೊಂದಿಗೆ ಯಥಾವತ್ತಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.