ಕರ್ನಾಟಕ ಪಬ್ಲಿಕ್ ಸ್ಕೂಲ್ ಹೊಸ್ಮಾರು ಇಲ್ಲಿ OSAAT ಎಜುಕೇಷನ್ ಚಾರಿಟೇಬಲ್ ಬೆಂಗಳೂರು ಇವರ 119 ನೇ ಪ್ರಾಜೆಕ್ಟ್ ನ್ನು , ದಾನಿಗಳಾದ Rakuten India Enterprise pvt,Ltd Bangalore ಇವರ ನೆರವಿನೊಂದಿಗೆ 4 ತರಗತಿ ಕೋಣೆಗಳನ್ನು ನಿರ್ಮಿಸಲು ಭೂಮಿ ಪೂಜೆ ಯನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಗದೀಶ್ ಅಂಚನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಪೂಜಾರಿ, ಕೆ.ಪಿ.ಎಸ್ ಉಪ ಪ್ರಾಂಶುಪಾಲರಾದ ದಿವಾಕರ ಹೆಗ್ಡೆ, ಪುರುಷೋತ್ತಮ ರಾವ್, ಪ್ರಾಥಮಿಕ ವಿಭಾಗದ ವಿಜಯ ಕುಮಾರ್ ಪಿ, ಭೌತಿಕ ಸೌಲಭ್ಯ ಸಮಿತಿಯ ಅಧ್ಯಕ್ಷರಾದ ರಮೇಶ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಪಂಚಾಯತ್ ಸದಸ್ಯರು, ಪೋಷಕರು, ಹಾಗೂ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.
ರಾಜೀವ್ ಗಾಂಧಿ ಆಧುನಿಕ ಭಾರತದ ರುವಾರಿಯಾಗಿದ್ದರು, ದೇಶದ ಸರ್ವಾಂಗಿಣ ಅಭಿವೃದ್ಧಿಯು ಗ್ರಾಮೀಣ ಅಭಿವೃದ್ಧಿಯನ್ನು ಅವಲಂಬಿಸಿದೆ ಆ ನೆಲೆಯಲ್ಲಿ ಒಬ್ಬ ಪ್ರದಾನಿಯಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ತಂದು ಗ್ರಾಮೀಣ ಮಟ್ಟದ ಬಡ ವರ್ಗದ ಜನರಿಗೆ ಆಡಳಿತ ನಡೆಸುವ ಅದಿಕಾರವನ್ನು ಕೊಟ್ಟವರು ರಾಜೀವ್ ಗಾಂಧಿಯವರು, ಇದು ಪ್ರಜಾತಂತ್ರ ವ್ಯವಸ್ಥೆಯ ಮಾಹಾ ಕ್ರಾಂತಿಗೆ ನಾಂದಿ ಹಾಡಿತ್ತು, ಭಾರತ ಇಂದು ವಿಶ್ವದ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರವಾಗುವಲ್ಲಿ ರಾಜೀವ್ ಗಾಂಧಿಯವರ ಆಡಳಿತಾತ್ಮಕ ದೂರದೃಷ್ಟಿತ್ವವೇ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಅಭಿಪ್ರಾಯ ಪಟ್ಡರು ಅವರು ಇಂದು ಕಾರ್ಕಳ ಕಾಂಗ್ರೆಸ್ ಕಛೇರಿಯಲ್ಲಿ ಭಾರತ ರತ್ನ ದಿ. ರಾಜೀವ್ ಗಾಂದಿಯವರ 34 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅದ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಮಾತನಾಡಿ 18 ವರ್ಷದ ಯುವ ವರ್ಗಕ್ಕೆ ಮತದಾನದ ಅಧಿಕಾರವನ್ನು ನೀಡಿ ಯುವಕರು ದೇಶದ ರಾಜಕೀಯ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕ್ಕೊಟ್ಟರು, ಬೊಪೋರ್ಸ್ ಎಂಬ ಸುಳ್ಳು ಹಗರಣವನ್ನು ಮುಂದಿಟ್ಟು ಅವರ ತೇಜೋವಧೆಯನ್ನು ಮಾಡಿದರೂ ಅದನ್ನು ಸವಾಲಾಗಿ ಸ್ವೀಕರಿಸಿ ದೇಶದ ಅಖಂಡತೆ ಮತ್ತು ಸೈದಾಂತಿಕ ಬದ್ದತೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾದರು. ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿಯು ಅವರ ನೆನಪು ಅಚ್ಚಳಿಯದೆ ಉಳಿದಿದ್ದು ಅವರು ಸಾಧಿಸಿದ ಸಾಧನೆಯ ಮಾರ್ಗಗಳು ಚಿರಸ್ಮರಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಳಿನಿ ಆಚಾರ್ಯ, ವಿವೇಕಾನಂದ ಶೆಣೈ, ಮಹಿಳಾ ಅದ್ಯಕ್ಷೆ ಭಾನು ಬಾಸ್ಕರ್, ಯುವ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕ್ ಅತ್ತೂರು, ಉಪಾದ್ಯಕ್ಷ ಆಕಾಶ್, ಯುವ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಜೋಗಿ, ನಗರ ಮಹಿಳಾ ಅದ್ಯಕ್ಷೆ ರೀನಾ, ಕಾರ್ಯದರ್ಶಿ ಜೋಕಿಂ ಪಿಂಟೋ, ಶೋಭಾ ಪ್ರಸಾದ್ ಉಪಸ್ಥಿತಿತರಿದ್ದರು, ಭೂನ್ಯಾಯ ಮಂಡಲಿ ಸದಸ್ಯ ಸುನೀಲ್ ಭಂಡಾರಿ ಸ್ವಾಗತಿಸಿ ಕಾಂತಿ ಶೆಟ್ಟಿ ಧನ್ಯವಾದವಿತ್ತರು
ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳ ಪೂರ್ಣ ಬಹುಮತದೊಂದಿಗೆ ಆಶೀರ್ವದಿಸಿ ಐತಿಹಾಸಿಕ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಗ್ಯಾರಂಟಿ ಸರ್ಕಾರಕ್ಕೆ ಇದೀಗ ಎರಡನೇ ವರ್ಷದ ಸಂಭ್ರಮ, ಇದು ಕೇವಲ ಕಾಂಗ್ರೆಸ್ ಪಕ್ಷದ ಸಂಭ್ರಮವಲ್ಲ ಬದಲಿಗೆ ಇದು ಕರ್ನಾಟಕ ಜನತೆಯ ಸಂಭ್ರಮ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ರಾವ್ ಅಭಿಪ್ರಾಯಪಟ್ಟಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳ ಆಶ್ವಾಸನೆಯೊಂದಿಗೆ ಚುನಾವಣೆ ಎದುರಿಸಿದ ರಾಜ್ಯ ಕಾಂಗ್ರೆಸ್ ಪಕ್ಷವು ಜನತೆಯ ಆಶಯಕ್ಕೆ ಚ್ಯುತಿ ಬಾರದೆ ತನ್ನ ಪಂಚ ಗ್ಯಾರಂಟಿಗಳ ಆಶ್ವಾಸನೆಯನ್ನು ಯಶಸ್ವಿಯಾಗಿ ಈಡೇರಿಸಿದ್ದು ಸರ್ಕಾರದ ಇಚ್ಚಾಶಕ್ತಿಯಿಂದಾಗಿ ಜನಪರ ಯೋಜನೆಗಳ ಯಶಸ್ವಿ ಅನುಷ್ಠಾನವಾಗಿ ರಾಜ್ಯದ ಜನತೆಯು ಪಂಚ ಗ್ಯಾರಂಟಿಗಳ ಲಾಭ ಪಡೆದು ಕೋಟ್ಯಾಂತರ ಕುಟುಂಬಗಳಿಂದು ನೆಮ್ಮದಿಯ ಬದುಕು ಕಟ್ಟಿಕೊಂಡಿದೆ.
ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯಗಳನ್ನು ಒದಗಿಸಿದ್ದು ಶಕ್ತಿ ಯೋಜನೆಯಡಿ ಒಟ್ಟು ಪ್ರಯಾಣಿಸಿದವರ ಪ್ರಯಾಣಗಳ ಸಂಖ್ಯೆ: 458 ಕೋಟಿ, ಹಾಗೂ ಇದಕ್ಕೆ ತಗುಲಿದ ವೆಚ್ಚ: ₹8,815 ಕೋಟಿ ರೂಪಾಯಿಗಳು.
ಗೃಹಿಣಿಯರಿಗೆ ತಿಂಗಳಿಗೆ ಕೊಡಲಾಗುವ 2000 ರೂಪಾಯಿಯ ಗೃಹಲಕ್ಷ್ಮಿ ಯೋಜನೆಯಲ್ಲಿ ಒಟ್ಟು ಫಲಾನುಭವಿಗಳು: 1.25 ಕೋಟಿ ಹಾಗೂ ಇದಕ್ಕೆ ಸರ್ಕಾರಿ ಭರಿಸಿದ ಮೊತ್ತ 47,773 ಕೋಟಿ ರೂಪಾಯಿಗಳು.
ಗೃಹಜ್ಯೋತಿ ಯೋಜನೆಯಡಿ
ಮನೆ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ್ ವಿದ್ಯುತ್ ಯೋಜನೆಯ ಫಲಾನುಭವಿಗಳು 1.63 ಕೋಟಿ ಕುಟುಂಬಗಳು ಹಾಗೂ ಗೃಹಜ್ಯೋತಿ ಯೋಜನೆಗೆ ತಗುಲಿದ ವೆಚ್ಚ 18,900 ಕೋಟಿ ರೂಪಾಯಿಗಳು.
ಜನರ ಹಸಿವು ನೀಗಿಸುವ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳು: 4.42 ಕೋಟಿ ಜನರು ಹಾಗೂ ಇದರ ವೆಚ್ಚ 13,564 ಕೋಟಿ ರೂಪಾಯಿಗಳು.
ಔದ್ಯೋಗಿಕ ಜೀವನಕ್ಕೆ ಪ್ರವೇಶಿಸುವ ಹಂತದಲ್ಲಿರುವ ಯುವ ಸಮುದಾಯಕ್ಕೆ ಶಕ್ತಿ ನೀಡಲು ಯುವನಿಧಿ ಯೋಜನೆಯಡಿ ಪದವಿ ಅಥವಾ ಡಿಪ್ಲೊಮಾ ಮುಗಿಸಿದ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 1500–3000 ರೂಪಾಯಿಗಳ ವೇತನ ರೂಪದ ಸಹಾಯ ಧನ ನೀಡಲಾಗುತ್ತಿದ್ದು ಇದರ ಫಲಾನುಭವಿಗಳು 3.70 ಲಕ್ಷ ಯುವಕರು ಮತ್ತು ಈ ಯೋಜನೆಗೆ ತಗುಲಿದ ವೆಚ್ಚ 376 ಕೋಟಿ ರೂಪಾಯಿಗಳಾಗಿದೆ.
ಈ ಐದೂ ಗ್ಯಾರಂಟಿಗಳ ಒಟ್ಟು ವೆಚ್ಚ 89,428 ಕೋಟಿ ರೂಪಾಯಿಗಳಾಗಿದೆ. ರಾಜ್ಯದ ಕಟ್ಟ ಕಡೆಯ ಜನರ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರವು ಇದು “ಮನ್ ಕೀ ಬಾತ್” ಸರ್ಕಾರ ಅಲ್ಲ “ಕಾಮ್ ಕೀ ಬಾತ್” ಸರ್ಕಾರ” ಆಗಿದೆ. ರಾಜ್ಯದಲ್ಲಿ ಒಬ್ಬನೇ ಒಬ್ಬ ಫಲಾನುಭವಿಯೂ ಕೂಡ ಇಲ್ಲಿ ತನಕ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ ಉದಾಹರಣೆಗಳಿಲ್ಲ, ಹಾಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರೂ ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿರುವುದಕ್ಕೆ ಇದು ಉದಾಹರಣೆಯಾಗಿದೆ ಮತ್ತು ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ರಾಜ್ಯ ಬಿಜೆಪಿಗೆ ಜನತೆ ನೀಡಿದ ತಪರಾಕಿಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ರೈಸ್ಟ್ ಕಿಂಗ್: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಫಲಿತಾಂಶ, ಮೂವರಿಗೆ ರ್ಯಾಂಕ್
ಶ್ರೀಯಾ 595 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ಆರನೇ ರ್ಯಾಂಕ್, ರಶ್ಮೀ ಹಾಗೂ ಅಮೂಲ್ಯ 591 ಅಂಕಗಳೊಂದಿಗೆ ಹತ್ತನೇ ರ್ಯಾಂಕ್
ಕಾರ್ಕಳ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -2 ರ ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಅಗ್ರ ಹತ್ತರೊಳಗೆ ರ್ಯಾಂಕ್ಗಳನ್ನು ಪಡೆದುಕೊಂಡಿದ್ದಾರೆ.
ದ್ವಿತೀಯ ವಿಜ್ಞಾನ ವಿಭಾಗದ ಶ್ರೀಯಾ 595 ಅಂಕಗಳೊ೦ದಿಗೆ ರಾಜ್ಯಮಟ್ಟದಲ್ಲಿ ಆರನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ರಶ್ಮೀ 591 ಹಾಗೂ ಅಮೂಲ್ಯ 591 ಅಂಕಗಳೊ೦ದಿಗೆ ರಾಜ್ಯಮಟ್ಟದಲ್ಲಿ ಹತ್ತನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಈ ಮೂಲಕ ಸಂಸ್ಥೆಯು ಈ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕು ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಲ್ಕು ರ್ಯಾಂಕ್ಗಳೊ೦ದಿಗೆ ಒಟ್ಟು ಎಂಟು ರ್ಯಾಂಕ್ಗಳನ್ನು ತನ್ನದಾಗಿಸಿಕೊಂಡಿದೆ.
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅಭಿಷೇಕ್ ಎಸ್. ರಾವ್ ಅವರು ‘ಡಿಸೈನ್ ಆಫ್ ಸ್ಕೋರ್ ಬೇಸ್ಡ್ ಮಾಡೆಲ್ ಫಾರ್ ಪ್ರೆಡಿಕ್ಟಿಂಗ್ ಮೋರ್ಟಾಲಿಟಿ ಇನ್ ಅಕ್ಯೂಟ್ ಫೆಬ್ರಾಯ್ಲ್ ಇಲ್ನೆಸ್ ವಿಥ್ ಲೋ ಪ್ಲೇಟ್ಲೆಟ್ ಕೌಂಟ್ ಸಿಂಡ್ರೋಮ್’ ಎಂಬ ವಿಷಯದ ಕುರಿತು ಬರೆದ ಸಂಶೋಧನಾ ಪ್ರಬಂಧಕ್ಕೆ ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಘೋಷಿಸಿದೆ.
ಇವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಕಾರ್ತಿಕ್ ಪೈ ಬಿ ಎಚ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.
ಕರಾವಳಿ ಭಾಗದ ಪ್ರಖ್ಯಾತ ಸರ್ಜಿಕಲ್ಸ್ ಸಂಸ್ಥೆಯಾದ ಗಿರಿಜಾ ಸರ್ಜಿಕಲ್ಸ್ ಮತ್ತು ಸೀನಿಯರ್ ಜೇಸಿ ಟೆಂಪಲ್ ಸಿಟಿ ಉಡುಪಿ ಲಿಜಿನ್ ಇವರ ವತಿಯಿಂದ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತಿರುವ ದಾದಿಯರನ್ನು ಗುರುತಿಸಿ ಗೌರವಿಸುವ ನೆಲೆಯಲ್ಲಿ ದಾದಿಯರ ( ನರ್ಸಸ್) ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಸರ್ಜಿನ್ ಆಗರುವ ಡಾ. ಅಶೋಕ್ ಅವರು, ಆಸ್ಪತ್ರೆಯ RMO ಆಗಿರುವ ಡಾ. ವಾಸುದೇವ, ಸೀನಿಯರ್ ಜೇಸಿಯ ಅಧ್ಯಕ್ಷ ಶ್ರೀ ಶಿವಾನಂದ್ ಶೆಟ್ಟಿಗಾರ್ ಮತ್ತು ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ನ ಮೆನೆಜಿಂಗ್ ಡೈರೆಕ್ಟರ್ ಆಗಿರುವ ರವೀಂದ್ರ ಶೆಟ್ಟಿ ಕಡೆಕಾರ್ ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ 5 ಜನ ದಾದಿಯರನ್ನು ಸನ್ಮಾನಿಸಿ ಉಳಿದ ಎಲ್ಲಾ ದಾದಿಯರನ್ನು ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯೀತು.
ವೇದಮೂರ್ತಿ ಶ್ರೀ ಕೇಂಜ ಶ್ರೀಧರ ತಂತ್ರಿಗಳು, ಕುತ್ಯಾರು ಇವರ ಮಾರ್ಗ ದರ್ಶನದಲ್ಲಿ ಪೂಜಾದಿ ಕಾರ್ಯಗಳು, ದೇವತಾ ಕಾರ್ಯಗಳು ಆರಂಭವಾಗಿದೆ. ಪ್ರಮಲ್ ಕುಮಾರ್ ವಾಸ್ತು ವಿನ್ಯಾಸ ನೀಡಿದ್ದಾರೆ.
ಪ್ರತಿ ತಿಂಗಳ ಸಂಕ್ರಾಂತಿಯ ದಿನ ಭಕ್ತರು ಈ ಕ್ಷೇತ್ರಕ್ಕೆ ಬಂದು ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ಹಲವಾರು ಪವಾಡಗಳು ನಡೆಯುತ್ತಿರುವ ಅನುಭವ ಹಲವರಿಗೆ ಆಗಿದ್ದು ಇದೊಂದು ವಿಶೇಷ ಕ್ಷೇತ್ರವಾಗಿ ರೂಪುಗೊಳ್ಳುವ ಲಕ್ಷಣವಾಗಿದೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಎಲ್ಲಾ ಜನರ ಸಹಕಾರವನ್ನು ಸಮಿತಿ ಕೋರಿದೆ.
ಈ ಬೆಟ್ಟ ಅತೀ ಎತ್ತರವಾದ ಬೆಟ್ಟ ವಾದುದರಿಂದ ಇಲ್ಲಿ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಹೀಗಾಗಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಬಹಳ ತ್ರಾಸದಾಯಕ. ಹೀಗಾಗಿ ಎಲ್ಲಾ ಭಕ್ತರು ಒಗ್ಗೂಡಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡ ಬೇಕಿದೆ.
ಕಲ್ಲಿನ ವ್ಯಾಪಾರಿಗಳು ಕಲ್ಲು, ಶಿಲ್ಪಿಗಳು ಕೆತ್ತನೆ ಕೆಲಸ, ಕಲ್ಲಿನ ವ್ಯಾಪಾರಿಗಳು ಕಲ್ಲನ್ನು ತುಂಡರಿಸುವ ಕೆಲಸ, ಮರದ ಕೆತ್ತನೆಯ ಶಿಲ್ಪಿಯ ಉದಾರ ಕೊಡುಗೆ, ಕ್ರೇನ್ಗಳ ಉಚಿತ ಸೇವೆ, ಲಾರಿ ಮುಂತಾದ ಉಚಿತ ಸೇವೆ ಸೇರಿದಂತೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಗರ್ಭಗುಡಿಯ ಕೆಲಸ ಅವರವರ ವೃತ್ತಿ ವ್ಯಾಪಾರಿಗಳಿಂದ ಉಚಿತವಾಗಿ ನಡೆಯುತ್ತಿದೆ. ಉಳಿದಂತೆ ಸುತ್ತು ಪೌಳಿಯ ಕೆಲಸ, ಅಂಗಣಕ್ಕೆ ನೆಲಹಾಸು, ದೀಪಗೋಪುರ, ಕೊಡಿಯಡಿಗಳನ್ನು ಊರ ಪರವೂರ ದಾನಿಗಳು ನಿರ್ಮಿಸಿ ಕೊಟ್ಟಿದ್ದಾರೆ.
ಸಮಿತಿಗಳು
ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ (ರಿ) ಕಾರ್ಕಳ
ಶ್ರೀ ಸುಭಾಸ್ ಚಂದ್ರ ಹೆಗ್ಡೆ ಅಧ್ಯಕ್ಷರು, ಶ್ರೀ ಸತ್ಯೇಂದ್ರ ಭಟ್ ಕಾರ್ಯದರ್ಶಿ,
ಶ್ರೀ ಚೇತನ್ ಕೋಟ್ಯಾನ್ ಕೋಶಾಧಿಕಾರಿ, ಶ್ರೀ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ ಟ್ರಸ್ಟಿ,
ಶ್ರೀ ಮನ್ಮಥ ಜೆ. ಶೆಟ್ಟಿ ಟ್ರಸ್ಟಿ, ಶ್ರೀ ಚಂದ್ರಶೇಖರ ಶೆಟ್ಟಿ ಟ್ರಸ್ಟಿ, ಶ್ರೀ ಪ್ರಶಾಂತ್ ನಾಯಕ್ ಟ್ರಸ್ಟಿ
ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ, ಕಾರ್ಕಳ ಗೌರವಾಧ್ಯಕ್ಷರು: ಶ್ರೀ ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ, ಶ್ರೀ ಬೋಳ ಪ್ರಭಾಕರ ಕಾಮತ್ ಉದ್ಯಮಿಗಳು, ಕಾರ್ಕಳ, ಶ್ರೀ ಎಮ್. ಕೆ. ವಿಜಯ ಕುಮಾರ್ ಹಿರಿಯ ವಕೀಲರು, ಕಾರ್ಕಳ, ಶ್ರೀ ಎನ್. ವಿನಯ ಹೆಗ್ಡೆ ಅಧ್ಯಕ್ಷರು, ನಿಟ್ಟೆ ವಿದ್ಯಾಸಂಸ್ಥೆ, ಶ್ರೀ ವಿಠಲ ಶೆಟ್ಟಿ ಬಲಿಪಗುತ್ತು, ಅತ್ತೂರು, ಶ್ರೀ ಕೆ. ಜಯರಾಮ ಪ್ರಭು ಆಡಳಿತ ಮೊಕ್ತೇಸರರು,
ಶ್ರೀ ವೆಂಕಟರಮಣ ದೇವಸ್ಥಾನ, ಕಾರ್ಕಳ
ಕಾರ್ಯಕಾರಿ ಸಮಿತಿ
ಡಾ| ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು,
ಶ್ರೀ ಬೋಳ ಪ್ರಶಾಂತ್ ಕಾಮತ್ ಕಾರ್ಯಾಧ್ಯಕ್ಷರು,
ಶ್ರೀ ಎಸ್.ನಿತ್ಯಾನಂದ ಪೈ ಕೋಶಾಧಿಕಾರಿ,
ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ
ಶ್ರೀ ಕ್ಷೇತ್ರದ ತಂತ್ರಿಗಳು,
ಶ್ರೀ ಪ್ರಸಾದ್ ಶೆಟ್ಟಿ ಕುತ್ಯಾರು ಶ್ರೀ ಕ್ಷೇತ್ರದ ಇಂಜಿನಿಯರ್,
ಶ್ರೀ ಕುಡುಪು ಕೃಷ್ಣರಾಜ ತಂತ್ರಿ ದೇವಾಲಯದ ವಾಸ್ತು ತಜ್ಞರು,
ಶ್ರೀ ಪ್ರಮಲ್ ಕುಮಾರ್ ಕಾರ್ಕಳ ದೈವಾಲಯದ ವಾಸ್ತು ತಜ್ಞರು
ಗೌರವ ಸಲಹೆಗಾರರು: ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಶಾಸಕರು, ಕಾಪು, ಶ್ರೀ ಯಶ್ಪಾಲ್ ಸುವರ್ಣ ಶಾಸಕರು, ಉಡುಪಿ, ಶ್ರೀ ರಘುಪತಿ ಭಟ್ ಮಾಜಿ ಶಾಸಕರು, ಉಡುಪಿ, ಶ್ರೀ ಉದಯ ಕುಮಾರ್ ಶೆಟ್ಟಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮುನಿಯಾಲು, ಶ್ರೀ ಭಾಸ್ಕರ್ ಎಸ್. ಕೋಟ್ಯಾನ್ ಅಧ್ಯಕ್ಷರು, ವಿ.ಹಿಂಪ. ಕಾರ್ಕಳ ತಾಲೂಕು ಶ್ರೀ ಸುಹಾಸ್ ಹೆಗ್ಡೆ ಚಾವಡಿಮನೆ ನಂದಳಿಕೆ, ಶ್ರೀ ವಿನೋದ್ ದೇವದಾಸ ಕಾಮತ್, ಮೂಲ್ಕಿ, ಶ್ರೀ ಸೋಮದೇವ ನಾರಾಯಣ ಮರಾಠೆ. ಜ್ಯೋತಿಷಿಗಳು, ಧಾರವಾಡ, ಶ್ರೀ ಗಣಪತಿ ಹೆಗ್ಡೆ, ಉದ್ಯಮಿಗಳು, ಕಾರ್ಕಳ, ಶ್ರೀ ಬೋಳ ಶ್ರೀನಿವಾಸ ಕಾಮತ್, ಗಾಯತ್ರಿ ಎಕ್ಸ್ಪೋರ್ಟ್ಸ್, ಗುಂಡ್ಯಡ್ಕ, ಶ್ರೀ ಮಹೇಶ್ ಶೆಟ್ಟಿ, ಕುಡುಪುಲಾಜೆ, ಉದ್ಯಮಿಗಳು, ಮುಂಬೈ, ಶ್ರೀ ರಾಜೇಶ್ ಶೆಣೈ ಪಂಚಮಿ ಕ್ಯಾಶ್ಯೂಸ್, ಕಾರ್ಕಳ, ಡಾ| ಸುಧಾಕರ ಶೆಟ್ಟಿ ಅಧ್ಯಕ್ಷರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್, ಗಣಿತನಗರ, ಶ್ರೀ ಕಡಂದಲೆ ಸುರೇಶ್ ಭಂಡಾರಿ, ಸಂಸ್ಥಾಪಕ ಅಧ್ಯಕ್ಷರು ವಿಶ್ವ ಭಂಡಾರಿ ಮಹಾಮಂಡಲ ಫೌಂಡೇಶನ್, ಶ್ರೀ ಬೆಳ್ವೆ ಗಣೇಶ್ ಕಿಣಿ, ಉದ್ಯಮಿಗಳು ಹೆಬ್ರಿ, ಡಾ| ಸುಧೀರ್ ಹೆಗ್ಡೆ, ಕಾಬೆಟ್ಟು, ನೇತ್ರ ತಜ್ಞರು, ಮಂಗಳೂರು, ಶ್ರೀ ರಾಮಕೃಷ್ಣ ಆಚಾರ್ಯ ಆಡಳಿತ ನಿರ್ದೇಶಕರು, S.k f ಅಲಂಗಾರು, ಶ್ರೀ ಮಹೇಶ್ ಠಾಕೂರ್, ಮೊಕ್ತೇಸರರು, ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಮಣಿಪಾಲ
ಕಾರ್ಕಳ ಬ್ಲಾಕ್ ಕಾರ್ಯಕಾರಿಣಿ ಸಮಿತಿಯ ಸಭೆ: ಪ್ರಮುಖ ವಿಚಾರಗಳ ಬಗ್ಗೆ ನಿರ್ಣಯ
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸಭೆಯು ಬ್ಲಾಕ್ ಅಧ್ಯಕ್ಷರಾದ ಶುಭದ್ ರಾವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಪೆಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಜನ ಪ್ರವಾಸಿಗರ ಆತ್ಮಕ್ಕೆ ಹಾಗೂ ಅಗಲಿದ ಹಿರಿಯ ಕಾಂಗ್ರೆಸ್ ನಾಯಕರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯು ನಮ್ಮ ಮುಂದಿದ್ದು ಅದಕ್ಕಾಗಿ ಸರ್ವ ರೀತಿಯಲ್ಲೂ ನಾವು ಸನ್ನದ್ದರಾಗ ಬೇಕಾಗಿದೆ ಎಂದರು. ಕಾಂಗ್ರೆಸ್ ವಿರುದ್ದ ವಿರೋಧಿಗಳು ಸುಳ್ಳು ಸುದ್ದಿಗಳೊಂದಿಗೆ ಅಪಪ್ರಚಾರ ನಡೆಸುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಾಗಿದೆ, ನಕಲಿ ಪ್ರತಿಮೆಯ ಭಗ್ನ ಅವಶೇಷಗಳಿಂದ ಅವಮಾನಕಾರಿ ರೀತಿಯಲ್ಲಿ ನಿಂತು ಕಾರ್ಕಳಕ್ಕೆ ಕಳಂಕದಂತಾಗಿರುವ ಬೈಲೂರು ಪರಶುರಾಮ ಥೀಮ್ ಪಾರ್ಕ್ ,ನ ಪರಶುರಾಮ ಪ್ರತಿಮೆಯ ಪುನರ್ ನಿರ್ಮಾಣಕ್ಕೆ ಹೋರಾಟದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಮಾತನಾಡಿ ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಕುರಿತು ಪಕ್ಷದ ಗಮನಕ್ಕೆ ಬಂದಿದ್ದು ಆರೋಗ್ಯ ಸಚಿವರ ಗಮನಕ್ಕೆ ತರಲಾಗವುದು ಎಂದರು. ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಸವಾಲಾಗಿ ಪರಿಗಣಿಸಿ ಪಕ್ಷದ ಎಲ್ಲಾ ಸ್ಥರಗಳ ಪ್ರಮುಖರು ಕಾರ್ಯೋನ್ಮುಖ ಆಗಬೇಕಿದೆ ಎಂದರು. ಹಾಗೂ ಎಂದರು. ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಮಾತನಾಡಿ ಜಿಲ್ಲಾ ಗ್ಯಾರಂಟಿ ಸಮಿತಿಯ ನಿರ್ಣಯದಂತೆ ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶವನ್ನು ನಡೆಸಲು ಯೋಜಿಸಲಾಗಿದೆ ಎಂದರು.
ಹೆಬ್ರಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದ ನಾಯಕರು ದಿವಂಗತ ಗೋಪಾಲ ಭಂಡಾರಿಯವರ ಪುತ್ತಳಿ ಸ್ಥಾಪನೆಯಲ್ಲಿ ಸಹಕಾರ ನೀಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಸಮಸ್ಯೆ, ಪರಶುರಾಮ ಥೀಮ್ ಪಾರ್ಕ್ ಹೋರಾಟ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನುಭಾಸ್ಕರ್ ಪೂಜಾರಿ, ಕೆ.ಎಮ್.ಎಪ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಕುಶ.ಆರ್. ಮೂಲ್ಯ, ಜಾರ್ಜ್ ಕ್ಯಾಸ್ತಲಿನೊ, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್ ಇನ್ನಾ, ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸೂರಜ್ ಶೆಟ್ಟಿ ನಕ್ರೆ, ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕ್ ಅತ್ತೂರು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಜೂಲಿಯೆಟ್ ಡಿಸೋಜ, ಪುರಸಭಾ ಸದ್ಯರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರುಗಳು, ಚುನಾಯಿತ ಜನ ಪ್ರತಿನಿಧಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಶಬೀರ್ ಅಹಮದ್ ಮಿಯಾರು ನಿರೂಪಿಸಿ ಗ್ಯಾರಂಟಿ ಸಮಿತಿಯ ಸದಸ್ಯರಾದ ಹೇಮಂತ್ ಆಚಾರ್ಯ ವಂದನಾರ್ಪಣೆಯಿತ್ತರು.
ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಮತ್ತು ವಿದ್ಯಾನಗರ ಗ್ರೀನ್ಸ್ –ಕ್ರೀಡಾಂಗಣ ಲೋಕಾರ್ಪಣೆ
ಮಣ್ಣುಪಳ್ಳ ಮಣಿಪಾಲವಾಗಿ, ಅನಂತರ ಮಣಿಪಾಲ ಶಿಕ್ಷಣ ಸಂಸ್ಥೆಗಳಾಗಿ ಇದೀಗ ಮಣಿಪಾಲ ಜ್ಞಾನಸುಧಾವಾಗಿ ಬೆಳಗುತ್ತಿರುವುದು ಅತ್ಯಂತ ಸಂತೋಷದ ವಿಷಯ. ಹಳ್ಳಿಗಳ ಅಬಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬಂತೆ ಹಳ್ಳಿಯಾಗಿದ್ದ ಮಣಿಪಾಲ ಇದೀಗ ಸರ್ವರ ಸಂತೋಷಕ್ಕೆ ಕಾರಣವಾಗಿ ಮುನ್ನಡೆಯುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಮಣಿಪಾಲ ಗ್ರೂಪ್ಸ್ ಅಧ್ಯಕ್ಷರಾದ ಟಿ. ಸುಧಾಕರ್ ಪೈ ಹೇಳಿದರು.
ಇವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ನವೀಕೃತ ಕಟ್ಟಡದ ಲೋಕಾರ್ಪಣೆ ಹಾಗೂ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣರವರು ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಕಾಶಿ ಉಡುಪಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಿಂದ ಸಿಗಲಿ, ಆ ಮೂಲಕ ಕನಸಿನ ಭಾರತ ನಿರ್ಮಾಣವಾಗಲಿ ಎಂದು ಹೇಳಿದರು.
ನೂತನವಾಗಿ ನಿರ್ಮಾಣಗೊಂಡ ಗ್ರಂಥಾಲಯವನ್ನು ಉದ್ಘಾಟಿಸಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಜ್ಞಾನಸುಧಾದ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾದ ರಘುಪತಿ ಭಟ್ರವರು ವಿದ್ಯಾನಗರ ಗ್ರೀನ್ಸ್- ಕ್ರೀಡಾಂಗಣವನ್ನು ಉದ್ಘಾಟಿಸಿ, ರಮೇಶ್ ಪೈರವರ ಈ ನೆಲಕ್ಕೆ ನೀಡಿದ ಯೋಗದಾನವನ್ನು ಜ್ಞಾನಸುಧಾವು ಸ್ಮರಣೀಯಗೊಳಿಸಿರುವುದು ಅಭಿನಂದನೀಯ ಎಂದರು. ಶ್ರೀಮತಿ ಜಯ ಸುಧಾಕರ ಪೈರವರು ನೂತನವಾಗಿ ನಿರ್ಮಾಣಗೊಂಡ ಶಾಂತಿ ರಮೇಶ ಪೈ ಸ್ಮಾರಕ ಸಭಾಂಗಣವನ್ನು, ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಸಂಸ್ಥಾಪಕ ಡಾ. ಕೆ.ಸಿ. ನಾಯ್ಕ್ರವರು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ನೂತನ ಕಛೇರಿಯನ್ನು ಉದ್ಘಾಟಿಸಿದರು.
ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದ ರಕ್ಷಾ ರಾಮಚಂದ್ರ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಹಾಗೂ ಉಡುಪಿಗೆ ಪ್ರಥಮ ರ್ಯಾಂಕ್ ಪಡೆದ ಆಸ್ತಿ ಶೆಟ್ಟಿ, ಜೆ.ಇ.ಇ.ಮೈನ್ಸ್ನಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾರ್ಕಳ ಜ್ಞಾನಸುಧಾದ ಆಕಾಶ್ ಎಚ್ ಪ್ರಭು ಮತ್ತು ಉಡುಪಿ ಜ್ಞಾನಸುಧಾಕ್ಕೆ ಪ್ರಥಮ ಸ್ಥಾನಿಯಾದ ಅಪೂರ್ವ್ ವಿ ಕುಮಾರ್ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪದವಿಪೂರ್ವ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರಾಗಿರುವ ಶ್ರೀಯುತ ಮಾರುತಿಯವರು ತಂದೆ ತಾಯಿಯ ಕನಸಿನೊಂದಿಗೆ, ಸಂಸ್ಥೆಯ ವಿಶೇಷ ಸೌಲಭ್ಯಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಿ ಎನ್ನುವುದು ಇಲಾಖೆಯ ಆಶಯ ಎಂದರು. ಮಣಿಪಾಲ ಹೈಸ್ಕೂಲ್ ಟ್ರಸ್ಟ್ನ ಸಂಚಾಲಕರಾದ ಶ್ರೀಯುತ ಪ್ರಕಾಶ ಶೆಟ್ಟಿ,
ಅಜೆಕಾರು ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ನ ಟ್ರಸ್ಟಿಗಳು, ಆಡಳಿತ ಮಂಡಳಿಯ ಸದಸ್ಯರು, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ, ಪ್ರಾಂಶುಪಾಲರುಗಳು, ಉಪಪ್ರಾಂಶುಪಾಲರುಗಳು ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಶಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.