Home Blog Page 75

ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ: ವಾರ್ಷಿಕ ಭಜನಾ ಮಂಗಲೋತ್ಸವ

0

ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ: ವಾರ್ಷಿಕ ಭಜನಾ ಮಂಗಲೋತ್ಸವ

ಕಾರ್ಕಳ:ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ 7ನೇ ವಾರ್ಷಿಕೋತ್ಸವ ಮತ್ತು ಭಜನಾ ಮಂಗಲೋತ್ಸವ ಶ್ರೀ ಕ್ಷೇತ್ರ ಎಳ್ಳಾರೆಯಲ್ಲಿ ನಡೆಯಿತು.ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನಾ ಮಂಗಲಕ್ಕೆ ಅರ್ಚಕ ಶ್ರೀನಿವಾಸ್ ಭಟ್ ಅವರು ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಯೋಗೀಶ್ ಮಲ್ಯ,ಉದ್ಯಮಿ ದಿನೇಶ್ ಕಿಣಿ,ಶ್ರೀನಾಥ್ ಅಡಿಗ,ಭಜನಾ ಪರಿಷತ್ ಅಧ್ಯಕ್ಷ ಹರೀಶ್ ಹೆಗ್ಡೆ,ಹಿರಿಯರಾದ ಗೋಪಾಲ್ ಸೇರಿಗಾರ್,ಭಜನಾ ಮಂಡಳಿಯ ಸಂಸ್ಥಾಪಕರಾದ ದೇವೇಂದ್ರ ಕಾಮತ್ ಎಳ್ಳಾರೆ,ಅಧ್ಯಕ್ಷೆ ಶಾಂತಿ ಪ್ರಭು ಉಪಸ್ಥಿತರಿದ್ದರು.
ವಿವಿಧ ಮಂಡಳಿಗಳ ಭಜನಾ ಸೇವೆಯೊಂದಿಗೆ ಮಂಗಲೋತ್ಸವವು ವೈಭವದಿಂದ ಸಂಪನ್ನಗೊಂಡಿತು.

ಸಾಧನೆ,ಪರಿಶ್ರಮಗಳ ತಪಸ್ಸಿನಿಂದ ಭವ್ಯ ಕಲಾಕೃತಿ ನಿರ್ಮಾಣ:ಕಾರ್ಕಳ ಕಮಲಾಕ್ಷ ಕಾಮತ್

0

ಸಾಧನೆ ,ಪರಿಶ್ರಮಗಳ ತಪಸ್ಸಿನಿಂದ ಭವ್ಯ ಕಲಾಕೃತಿ ನಿರ್ಮಾಣ:ಕಾರ್ಕಳ ಕಮಲಾಕ್ಷ ಕಾಮತ್

ಕಾರ್ಕಳ: ಚಾಕ್ ಪೀಸ್ ಮಾಧ್ಯಮದಲ್ಲಿ ಗೀತೋಪದೇಶ ಮಂಟಪ ರಚನೆ ಒಂದು ಅಪೂರ್ವ ಕಲಾಕೃತಿಯಾಗಿದೆ . ಅನೇಕ ವರ್ಷಗಳ ಸಾಧನೆ , ಪರಿಣತಿ , ಪರಿಶ್ರಮಗಳ ತಪಸ್ಸಿನಿಂದ ಇಂತಹ ಭವ್ಯ ಕೃತಿಗಳು ಮೈದಳೆಯುತ್ತವೆ. ದೇವರ ಅನುಗ್ರಹವಿದ್ದಾಗ ಮಾತ್ರ ಇಂತಹ ಅತ್ಯಂತ ವಿರಳ ಎನ್ನ ಬಹುದಾದ ಸಾಧನೆ ಸಾಧ್ಯ . 1200 ಚಾಕ್ ಪೀಸ್ ಉಪಯೋಗಿಸಿ ರಚಿಸಿದ ಸಮಗ್ರ ಗೀತೋಪದೇಶ ಮಹತ್ವ ಸಾರುವ ಈ ಕೃತಿ ಸಂಗ್ರಹಯೋಗ್ಯ ಎಂದು ನಿವೃತ್ತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಹೇಳಿದರು.

1200 ಚಾಕ್ ಪೀಸ್ ಬಳಸಿ ಗೀತೋಪದೇಶ ಕಲಾಕೃತಿ ನಿರ್ಮಿಸಿದ 73ರ ಹರೆಯದ ಹಿರಿಯ ಕಲಾವಿದ ಚೋಲ್ಪಾಡಿ ರಾಮಕೃಷ್ಣ ಕಾಮತ್ ಅವರನ್ನು ಎಸ್ ವಿ ಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ. ಶೆಣೈ, ಎಸ್ ವಿ ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನೇಮಿರಾಜ್ ಶೆಟ್ಟಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಹೊಸಸಂಜೆ ಬಳಗದ ಅಧ್ಯಕ್ಷ ಆರ್ . ದೇವರಾಯ ಪ್ರಭು ಸ್ವಾಗತಿಸಿದರು.ಶಿವಾ ಜಾಹೀರಾತು ಸಂಸ್ಥೆಯ ಮಾಲಕ ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು .ಚೋಲ್ಪಾಡಿ ಸದಾಶಿವ ಕಾಮತ್ ವಂದಿಸಿದರು.

 

 

ಯಕ್ಷಗಾನ ಪ್ರದರ್ಶನ ಅನುಮತಿ ನಿಯಮ ಸರಳೀಕರಿಸಲು ಪ್ರಯತ್ನ-ಶಾಸಕ ಸುನೀಲ್‌ ಕುಮಾರ್ ಅರುಣ್‌ ಜಾರ್ಕಳಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ 

0

ಯಕ್ಷಗಾನ ಪ್ರದರ್ಶನ ಅನುಮತಿ ನಿಯಮ ಸರಳೀಕರಿಸಲು ಪ್ರಯತ್ನ-ಶಾಸಕ ಸುನೀಲ್‌ ಕುಮಾರ್

ಅರುಣ್‌ ಜಾರ್ಕಳಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ

ಕಾರ್ಕಳ: ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಕಾನೂನಿನ ಆತಂಕ ಎದುರಾಗುತ್ತಿರುವ ನಿಟ್ಟಿನಲ್ಲಿ ಎಲ್ಲ ಮೇಳಗಳಿಗೂ ಯಕ್ಷಗಾನ ಪ್ರದರ್ಶನಕ್ಕೆ ಏಕಗಂಟಿನಲ್ಲಿ ಅನುಮತಿ ನೀಡುವ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಸರಕಾರ ನಿಯಮ ರೂಪಿಸಲು ಪ್ರಯತ್ನಿಸುವುದಾಗಿ ಶಾಸಕ ವಿ. ಸುನೀಲ್‌ ಕುಮಾರ್‌ ಹೇಳಿದರು.

ಹಿರ್ಗಾನ ಶ್ರೀಕುಂದೇಶ್ವರ ಕ್ಷೇತ್ರದಲ್ಲಿ ಹಾಸ್ಯಗಾರ ಅರುಣ್‌ ಕುಮಾರ್‌ ಜಾರ್ಕಳ ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಯಕ್ಷಗಾನ ನಮ್ಮ ಸಂಸ್ಕೃತಿ. ನಮ್ಮ ಅಸ್ಮಿತೆಗೆ ಧಕ್ಕೆಯಾಗುವ ನಿಯಮಗಳನ್ನು ಸಡಿಲಿಸಿ, ಯಕ್ಷಗಾನ ಪ್ರದರ್ಶನಗಳಿಗೆ ಯಾವುದೇ ಅಡೆತಡೆ ಇಲ್ಲದೆ ಅನುಮತಿ ನೀಡುವ ಬೇಡಿಕೆಯನ್ನು ಈಡೇರಿಕೆಗೆ ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು ಹಾಸ್ಯ ಕಲಾವಿದ ಅರುಣ್‌ ಕುಮಾರ್‌ ಜಾರ್ಕಳ ಅವರ ತಾಯಿಯ ಹೆಸರಲ್ಲಿ ಮಂಜೂರಾದ ಅಕ್ರಮ ಸಕ್ರಮ ಜಾಗ ತಡೆ ಹಿಡಿದಿರುವ ಕುರಿತು ಪರಿಶೀಲನೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.

ಧಾರ್ಮಿಕವಾಗಿ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಋಷಿಯಂತೆ ಬದುಕನ್ನು ಸವೆಸಿದ ದಿ.ರಾಘವೇಂದ್ರ ಭಟ್ಟರ ನೆನಪಲ್ಲಿ ಕ್ಷೇತ್ರದ ವತಿಯಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಗೆ ಯಕ್ಷಗಾನ ರಂಗದಲ್ಲಿಯೇ ವಿಶಿಷ್ಟ ಮನ್ನಣೆ, ಗೌರವ ಇದೆ ಎಂದು ಪ್ರಸಿದ್ದ ಯಕ್ಷಗಾನ ಕಲಾವಿದ ನ್ಯಾಯವಾದಿ ಶ್ರೀರಮಣಾಚಾರ್‌ ಹೇಳಿದರು. ರಾತ್ರಿ ಹತ್ತು ಗಂಟೆ ಮೇಲೆ ಯಕ್ಷಗಾನವನ್ನು ಪ್ರದರ್ಶಿಸುವುದು ಕಾನೂನಿನ ತೊಡಕಾಗಿ ಪರಿಣಮಿಸಿದೆ. ತಲೆ ತಲಾಂತರಗಳಿಂದ ಪ್ರದರ್ಶನವಾಗುತ್ತಿರುವ ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಹಲವು ಅನುಮತಿ ಪಡೆಯುವ ವ್ವಯಸ್ಥೆಯನ್ನು ಸರಳೀಕರಿಸುವಂತೆ ಮನವಿ ಮಾಡಿದರು.

ಕುಂದೇಶ್ವರ ಸಮ್ಮಾನ್‌ ಸ್ವೀಕರಿಸಿದ ಅರುಣ್‌ ಕುಮಾರ್‌ ಜಾರ್ಕಳ ಮಾತನಾಡಿ, ಅತಿಯಾದ ನೋವು ಇದ್ದವರು ಮಾತ್ರ ಇತರರನ್ನು ನಗಿಸಲು ಸಾಧ್ಯ, ಅವರು ಹಾಸ್ಯದ ಮೂಲಕ ಖುಷಿ ಕೊಡಬಲ್ಲರು ಎಂದ ಅವರು. ಬದುಕಿನ ಕಟು ಸತ್ಯವೇ ಹಾಸ್ಯ ಎಂದು ವಿಶ್ಲೇಷಿಸಿದರು.

ತೆಲಂಗಾಣ ಮೂಲದ ನಾನು ಹುಟ್ಟಿ ಬೆಳೆದದ್ದು ತುಳುನಾಡಿನಲ್ಲಿ. ಜಾರ್ಕಳದಲ್ಲಿ ತಾಯಿಯ ಹೆಸರಲ್ಲಿ ಅಕ್ರಮ ಸಕ್ರಮ ಜಾಗ ಮಂಜೂರಾಗಿದೆ. ಆದರೆ ತಾಯಿ ತೀರಿ ಹೋಗಿದ್ದಾರೆ, ಈಗ ಜಾಗ ನೀಡುತ್ತಿಲ್ಲ. ೨೬೬ ಸನ್ಮಾನ ಸ್ವೀಕರಿಸಿದ್ದೇನೆ ಆದರೆ ಕುಂದೇಶ್ವರ ಸನ್ಮಾನ ಘೋಷಣೆಯಾದ ಬಳಿಕ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಬಂದಿದ. ಯಕ್ಷಗಾನ ಶೆಟ್ರುಗಳಿಗೆ ಮತ್ತು ಭಟ್ರುಗಳಿಗೆ ಮಾತ್ರ ಎಂಬ ಮಾತಿದೆ. ಆದರೆ ಯಕ್ಷಗಾನ ರಂಗದಲ್ಲಿ ಹಾಗಿಲ್ಲ. ತೆಲುಗಿನವ, ತಮಿಳಿನವ ಎಂದೆಣಿಸದೆ, ವಶೀಲಿ ಬಾಜಿ ಇಲ್ಲದೆ ಇಲ್ಲದೆ ಈ ರಂಗದವರು ನಮ್ಮನ್ನೆಲ್ಲ ಬೆಳೆಸಿ ಗೌರವಿಸಿದ್ದಾರೆ ಎಂದರು.

ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದಿಸಿ ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಗಂಗಾ ರಾಘವೇಂದ್ರ ಭಟ್‌, ಧರ್ಮದರ್ಶಿಗಳಾದ ಕೃಷ್ಣರಾಜೇಂದ್ರ ಭಟ್‌, ರವೀಂದ್ರ ಭಟ್‌, ಸುಧೀಂದ್ರ ಭಟ್‌, ಯಕ್ಷಕೂಟದ ಸಂಚಾಲಕ ಎಲ್ಲೂರು ರಾಮಚಂದ್ರ ರಾವ್‌, ಸಿದ್ಧಕಟ್ಟೆ ವೈಭವ್‌ ಮೆಡಿಕಲ್ಸ್‌ನ ಸಚ್ಚಿದಾನಂದ ಎಡಮಲೆ, ನವೀನ್‌ ಟಿ.ಆರ್., ನ್ಯೂಸ್‌ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ, ನಿರ್ದೇಶಕ ಅರುಣ್‌ ಮಾಂಜ, ಬೆಂಕಿನಾಥ ಮೇಳದ ಸಂಚಾಲಕ ಸುರೇಂದ್ರನಾಥ ಮಲ್ಲಿ, ಬ್ರಹ್ಮವಾಹಕ ಕದ್ರಿ ಕೃಷ್ಣ ಭಟ್‌,ಉದ್ಯಮಿಗಳಾದ ಕುಂಜತ್ತೋಡಿ ವಾಸುದೇವ ಅಲೆವೂರಾಯ, ರವಿಕಾಂತ ಭಟ್‌, ಬಜಗೋಳಿ ಸರಕಾರಿ ಕಾಲೇಜು ಪ್ರಾಂಶುಪಾಲ ಕೆ.ಪಿ.ಲಕ್ಷ್ಮೀನಾರಾಯಣ, ರಂಜಿನಿ ಉಪಸ್ಥಿತರಿದ್ದರು.

ವರ್ಷಾವಧಿ ಉತ್ಸವಳ ಕುಂದೇಶ್ವರ ಕ್ಷೇತ್ರದಲ್ಲಿ ರಂಗಪೂಜೆ, ಸುತ್ತುಬಲಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ರಕ್ತೇಶ್ವರಿ ನೇಮ ಭಕ್ತಿ ಸಂಭ್ರಮದಿಂದ ನಡೆಯಿತು. ಬೆಂಕಿನಾಥೇಶ್ವರ ಮೇಳದಿಂದ ಶ್ರೀದೇವಿ ಅಗ್ನಿ ಕಲ್ಲುರ್ಟಿ ಯಕ್ಷಗಾನ ಬಯಲಾಟ ನಡೆಯಿತು. ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್‌ ಹೆಗ್ಡೆ ಮಾಳ, ದಕ ಫೋಟೋಗ್ರಾಫರ್‌ ಅಸೋಸಿಯೇಶನ್‌ ಅಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಉದ್ಯಮಿಗಳಾದ ಬೋಳ ಅಜಿತ್‌ ಕಾಮತ್‌, ಸಿರಿಯಣ್ಣ ಶೆಟ್ಟಿ ಮೊದಲಾದವರು ಆಗಮಿಸಿದರು.

ಕಾರ್ಕಗಳ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಜಾತ್ರೆ ಸಂದರ್ಭ ಹಾಸ್ಯಗಾರ ಅರುಣ್‌ ಕುಮಾರ್‌ ಜಾರ್ಕಳ ಅವರಿಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಕಳ:ಜೋಡುರಸ್ತೆಯಲ್ಲಿ ಜ್ಯೂಸ್ & ಐಸ್ ಕೆಫೆ ಶುಭಾರಂಭ

0

ಕಾರ್ಕಳ:ಜೋಡುರಸ್ತೆಯಲ್ಲಿ ಜ್ಯೂಸ್ & ಐಸ್ ಕೆಫೆ ಶುಭಾರಂಭ

ಕಾರ್ಕಳ:ಜೋಡುರಸ್ತೆಯಲ್ಲಿ ಜ್ಯೂಸ್ & ಐಸ್ ಕೆಫೆ ಶುಭಾರಂಭಗೊಂಡಿದೆ.

ಕೆಫೆಯ ಉದ್ಘಾಟನೆ ಸಮಾರಂಭವು ಸ್ಥಳೀಯ ಗಣ್ಯರು, ವ್ಯಾಪಾರಿಗಳು, ಹಾಗೂ ಜನಸಾಮಾನ್ಯರ ಸಡಗರದ ನಡುವೆ ನಡೆಯಿತು.

ಕೆಫೆಯ ವಿಶೇಷತೆಗಳು:
ಬೆಲ್ಲ ಚಹಾ,ತಾಜಾ ಹಣ್ಣುಗಳ ಜ್ಯೂಸ್‌ಗಳು,ಆರೋಗ್ಯಕರ ಪಾನೀಯಗಳು,ಐಸ್‌ ಕ್ರೀಮ್ ಡೆಲೈಟ್ಸ್,ಮಿಲ್ಕ್‌ಶೇಕ್‌ಗಳು ಮತ್ತು ಕೋಲ್ಡ್ ಕಾಫಿ,ಸ್ನ್ಯಾಕ್ಸ್ ಕ್ರಿಸ್ಪಿ ಬೈಟ್ಸ್‌ ಕೆಫೆಯಲ್ಲಿ ಸಿಗಲಿದೆ.

ವಿಳಾಸ:ಜ್ಯೂಸ್ & ಐಸ್ ಕೆಕಫೆ, ಅಧಿಧನ್ ದುರ್ಗಾ ಎನ್ಕ್ಲೇವ್,ಬಿಟಿಕೆ ಪೆಟ್ರೋಲ್ ಪಂಪ್ ಎದುರು,ಜೋಡುರಸ್ತೆ, ಕಾರ್ಕಳ

ಹೆಚ್ಚಿನ ಮಾಹಿತಿಗೆ ಅಥವಾ ಆರ್ಡರ್‌ಗಳಿಗೆ ಸಂಪರ್ಕಿಸಿ: +91 8123006118

ಕಾರ್ಕಳ:ಜೋಡುರಸ್ತೆಯಲ್ಲಿ ‘ಜ್ಯೂಸ್ & ಐಸ್’ ಕೆಫೆ ಶುಭಾರಂಭ

0

ಕಾರ್ಕಳ:ಜೋಡುರಸ್ತೆಯಲ್ಲಿ ‘ಜ್ಯೂಸ್ & ಐಸ್’ ಕೆಫೆ ಶುಭಾರಂಭ

ಕಾರ್ಕಳ:ಜೋಡುರಸ್ತೆಯಲ್ಲಿ ಜ್ಯೂಸ್ & ಐಸ್ ಕೆಫೆ ಶುಭಾರಂಭಗೊಂಡಿದೆ.

ಕೆಫೆಯ ವಿಶೇಷತೆಗಳು:
ಬೆಲ್ಲ ಚಹಾ,ತಾಜಾ ಹಣ್ಣುಗಳ ಜ್ಯೂಸ್‌ಗಳು,ಆರೋಗ್ಯಕರ ಪಾನೀಯಗಳು,ಐಸ್‌ ಕ್ರೀಮ್ ಡೆಲೈಟ್ಸ್,ಮಿಲ್ಕ್‌ಶೇಕ್‌ಗಳು ಮತ್ತು ಕೋಲ್ಡ್ ಕಾಫಿ,ಸ್ನ್ಯಾಕ್ಸ್ ಕ್ರಿಸ್ಪಿ ಬೈಟ್ಸ್‌ ಕೆಫೆಯಲ್ಲಿ ಸಿಗಲಿದೆ.

ವಿಳಾಸ:ಜ್ಯೂಸ್ & ಐಸ್ ಕೆಫೆ, ಅಧಿಧನ್ ದುರ್ಗಾ ಎನ್ಕ್ಲೇವ್,ಬಿಟಿಕೆ ಪೆಟ್ರೋಲ್ ಪಂಪ್ ಎದುರು,ಜೋಡುರಸ್ತೆ, ಕಾರ್ಕಳ

ಹೆಚ್ಚಿನ ಮಾಹಿತಿಗೆ ಅಥವಾ ಆರ್ಡರ್‌ಗಳಿಗೆ ಸಂಪರ್ಕಿಸಿ: +91 8123006118

ಬಜಗೋಳಿ ಡಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಶ್ರೀ ರಾಮ ತಾರಕ ಜಪಯಜ್ಞ ಜಾತಿ ಮತ ಭೇದವಿಲ್ಲದೆ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ

0

ಬಜಗೋಳಿ ಡಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಶ್ರೀ ರಾಮ ತಾರಕ ಜಪಯಜ್ಞ

ಜಾತಿ ಮತ ಭೇದವಿಲ್ಲದೆ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ

ಅಯೋಧ್ಯೆ ಶ್ರೀ ರಾಮ ದೇವರ ಮಹೋತ್ಸವದ ಅಂಗವಾಗಿ, ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಎರಡನೇ ವರ್ಷದ ಸವಿನೆನಪಿಗಾಗಿ ಬಜಗೋಳಿ ಡಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಜನವರಿ 22 ಬುಧವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಶ್ರೀ ರಾಮ ತಾರಕ ಜಪಯಜ್ಞ ನಡೆಯಲಿದೆ.

ಸಮಸ್ತ ಹಿಂದೂಗಳು ಜಾತಿ ಮತ ಭೇದವಿಲ್ಲದೆ ಹಿಂದೂಗಳೆಲ್ಲರೂ ಸಮಾನತೆ ಯಿಂದ ಶ್ರೀ ರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ತಾರಕ ಮಂತ್ರ ಪಠಿಸಲು ಅವಕಾಶ ಕಲ್ಪಿಸಲಾಗಿದೆ.ಸಂಜೆ ಅಯೋಧ್ಯೆಯ ಕಡೆ ಮುಖಮಾಡಿ ಹಣತೆಯನ್ನು ಕೈಯಲ್ಲಿ ಹಿಡಿದು ಮಹಾಮಂಗಳಾರತಿ ಮಾಡಲು ಅವಕಾಶವಿದೆ.

ಸಂಜೆ 6.30ಕ್ಕೆ ಗಂಟೆಗೆ ಧಾರ್ಮಿಕ ಚಿಂತಕರಾದ ಬಾರ್ಕೂರು ದಾಮೋದರ ಶರ್ಮಾರವರಿಂದ ಧಾರ್ಮಿಕ ಉಪನ್ಯಾಸ ಮತ್ತು ಕಲ್ಲಡ್ಕ ವಿಠ್ಠಲ್ ನಾಯಕ್ ರವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

ಸಮಸ್ತ ಹಿಂದೂಗಳು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗಬೇಕಾಗಿ ಶ್ರೀ ರಾಮ ತಾರಕ ಯಜ್ಞ ಸಮಿತಿಯರು ತಿಳಿಸಿದ್ದಾರೆ.

ಕ್ರೀಡಾ ವೈಭವ – 2025ರ ಅಧ್ಯಕ್ಷರಾಗಿ ಕರ್ಣ ನೂರಾಳ್ ಬೆಟ್ಟು ಪುನಾರಾಯ್ಕೆ.

0

ಕ್ರೀಡಾ ವೈಭವ – 2025ರ ಅಧ್ಯಕ್ಷರಾಗಿ ಕರ್ಣ ನೂರಾಳ್ ಬೆಟ್ಟು ಪುನಾರಾಯ್ಕೆ.

ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇದರ ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಕರ್ಣ ನೂರಾಳ್ ಬೆಟ್ಟು, ಉಪಾಧ್ಯಕ್ಷರಾಗಿ ಶ್ರೀಮತಿ ಪುಷ್ಪಲತಾ, ಶ್ರೀಮತಿ ಶಾರದಾ ಪೇರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಅಂಡಾರು, ಸಹ ಕಾರ್ಯದರ್ಶಿಯಾಗಿ ಕುಮಾರಿ ಮಲ್ಲಿಕಾ ಕಬ್ಬಿನಾಲೆ, ಕೋಶಾಧಿಕಾರಿಯಾಗಿ ಪ್ರಶಾಂತ್ ನೂರಾಳ್ ಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಕೆರ್ವಾಶೆ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಅಕ್ಷಯ್ ನಾಡ್ಪಲು, ಸಂಯೋಜಕರಾಗಿ ವಿಷ್ಣುಮೂರ್ತಿ ಕೆರ್ವಾಶೆ, ಪದ್ಮನಾಭ ಅಂಡಾರು, ಸುಕೇಶ್ ನೂರಾಳ್ ಬೆಟ್ಟು, ಮಧುಸೂದನ್ ಅಂಡಾರು, ಪ್ರದೀಪ್ ನೂರಾಳ್ ಬೆಟ್ಟು, ಮನೋಜ್ ಪೇರಡ್ಕ, ಸುದೀಪ್ ಅಂಡಾರು, ರವಿ ಬಾಲ್ಚಾರು ಕಬ್ಬಿನಾಲೆ, ಕೃಷ್ಣ ಮಾಳ, ಶಿವಾನಂದ ಕೆರ್ವಾಶೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಂತ ಲಾರೆನ್ಸ್ ಬಸಿಲಿಕ ಅತ್ತೂರು ವಾರ್ಷಿಕ ಮಹೋತ್ಸವಕ್ಕೆ ಚಾಲನೆ

0

ಸಂತ ಲಾರೆನ್ಸ್ ಬಸಿಲಿಕ ಅತ್ತೂರು ವಾರ್ಷಿಕ ಮಹೋತ್ಸವಕ್ಕೆ ಚಾಲನೆ

ವಾರ್ಷಿಕ ಮಹೋತ್ಸವಕ್ಕೆ ಚಾಲನೆ ಹಾಗೂ ಸಂತ ಸಾಬೆಸ್ಟಿಯನ್ ನರ ಹಬ್ಬದ ಆಚರಣೆ.

ದಿನಾಂಕ 19 -01- 2025 ಭಾನುವಾರ ಬೆಳಿಗ್ಗೆ 7. 30ಕ್ಕೆ ದಿವ್ಯ ಬಲಿ ಪೂಜೆಯ ಮೂಲಕ ಸಂತ ಸೇಬಶ್ಚಿಯನರಾ ಹಬ್ಬವನ್ನು ಆಚರಿಸಲಾಯಿತು. ಕಲ್ಯಾಣಪುರ ಚರ್ಚ್ನ ವಂದನೀಯ ಡಾ ಜೇನ್ಸಿಲ್ ಆಳ್ವಾ ಪ್ರಧಾನ ಗುರುಗಳಾಗಿ. ಪೂಜೆಯನ್ನು ನೆರವೇರಿಸಿದರು. ತದನಂತರ ಸಂತ ಸಬ್ಬಾಸ್ಟಿಯಾನರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತಂದು ಆಶೀರ್ವಚನವನ್ನು ನೀಡಲಾಯಿತು.

ತದನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು.ಉದ್ಘಾಟಕರಾಗಿ ವಂದನೀಯ ಡಾ ಜೇನ್ಸಿಲ್ ಆಳ್ವಾ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮ ಗುರು ವಂದನಿಯಾ ಆಲ್ಬನ್ ಡಿಸೋಜ, ಸಹಾಯಕ ಧರ್ಮ ಗುರುಗಳಾದ ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಧರ್ಮ ಗುರುಗಳಾದ ರೋಮನ್ ಮಸ್ಕೇರೆನ್ಹಸ್, ಉಪ ಯಜಕ ವಲೇಶ್ ಆರಾನ್ಹ
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಕಾರ್ಯದರ್ಶಿ ರೋನಾಲ್ಡ್ ನೋರೊನ್ಹ, 20 ಆಯೋಗದ ಸಂಚಾಲಕರಾದ ಶ್ರೀಮತಿ ಬೆನ್ನಡಿಕ್ಟ ನೋರೊನ್ಹ, ಇವರು ದೀಪ ಬೆಳಗಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು.

ತದನಂತರ ಮಾತನಾಡಿದ ವಂದನೀಯ ಡಾ ಜೇನ್ಸಿಲ್ ಆಳ್ವಾ ಮಾತನಾಡಿದ ಸಂತ ಲಾರೆನ್ಸರ ಹಬ್ಬ ಅನೇಕ ವರ್ಷಗಳಿಂದ ಅನೇಕ ಭಕ್ತಾದಿಗಳನ್ನು ಜಾತಿ ಮತ ಧರ್ಮ ಬೇಯುತವಿಲ್ಲದೆ ಆಚರಣೆ ಮಾಡಲಾಗುತ್ತದೆ ಸಂತ ಲಾರೆನ್ಸರು ಅನೇಕ ಆಶೀರ್ವಾದಗಳು ಪವಾಡಗಳು ಈ ಪವಿತ್ರ ಜಾಗದಲ್ಲಿ ನಡೆಯುತ್ತದೆ. ಪ್ರತಿಯೊಬ್ಬರ ಸಹಕಾರವು ಅಗತ್ಯವಾಗಿದೆ ಎಂದು ಶುಭ ಹಾರೈಸಿದರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಇವರು ಕಾರ್ಯಕ್ರಮ ನೆರವೇರಸಿದುರು. ಪಾಲನಾ ಮಂಡಳಿ ಕಾರ್ಯದರ್ಶಿ ರೊನಾಲ್ ನೊರೊನ್ಹಾ. ಧನ್ಯವಾದ ಸಮರ್ಪಿಸಿದರು. ಅತ್ತೂರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ಪುಲ್ಕೇರಿ ಬೈಪಾಸ್ ರಕ್ತೇಶ್ವರಿ ಸನ್ನಿಧಿಗೆ ಬೆಳ್ಳಿ ಕಲಶ ಅರ್ಪಣೆ.

0

ಪುಲ್ಕೇರಿ ಬೈಪಾಸ್ ರಕ್ತೇಶ್ವರಿ ಸನ್ನಿಧಿಗೆ ಬೆಳ್ಳಿ ಕಲಶ ಅರ್ಪಣೆ.
ಛತ್ರಪತಿ ಫೌಂಡೇಶನ್ ಇದರ ವತಿಯಿಂದ ಕಾರ್ಕಳ ಪುಲ್ಕೇರಿ ಬೈಪಾಸ್ ನಲ್ಲಿರುವ ಇತಿಹಾಸ ಪ್ರಸಿದ್ಧ ರಕ್ತೇಶ್ವರಿ ಸನ್ನಿಧಿಗೆ ಬೆಳ್ಳಿ ಕಲಶದ ಸಮರ್ಪಣೆಯು ನೆರವೇರಿತು.

ಕ್ಷೇತ್ರದ ಪ್ರಮುಖರಾದ ವಸಂತ ಕೋಟ್ಯಾನ್, ಕ್ಷೇತ್ರದ ಅರ್ಚಕರ ಸಮ್ಮುಖದಲ್ಲಿ ಛತ್ರಪತಿ ಫೌಂಡೇಶನ್ ಸಂಸ್ಥಾಪಕರಾದ ಗಿರೀಶ್ ರಾವ್ ಇವರು ಸಮರ್ಪಿಸಿದರು.

 

ಮುಡಾರು ಗ್ರಾಮ ಪಂಚಾಯತ್ ಮಕ್ಕಳ ವಿಶೇಷ ಗ್ರಾಮ ಸಭೆ

0

ಮುಡಾರು ಗ್ರಾಮ ಪಂಚಾಯತ್ ಮಕ್ಕಳ ವಿಶೇಷ ಗ್ರಾಮ ಸಭೆ

ಬಜಗೋಳಿ: ಮುಡಾರು ಗ್ರಾಮ ಪಂಚಾಯತ್ ನ ವಿ. ಎಸ್ ಆಚಾರ್ಯ ಸಭಾಭವನದಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ನಡೆಯಿತು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಯಿಂದ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಶಾಲಾ ಮಕ್ಕಳ ವಿವಿಧ ಬೇಡಿಕೆಯನ್ನು ಸ್ವೀಕರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜಯವಂತರಾವ್ ರವರು ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ಕಾರ್ಯ ಕ್ರಮ ನಡೆಸಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ ಡಿ ಅತಿಕಾರಿ ವಹಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಾಲತಿ ನಾಯ್ಕ್, ವಿನಯ ಡಿ ಬಂಗೇರ, ಶಿವ ಪ್ರಸಾದ್. ಪ್ರಶಾಂತ್ ಕುಮಾರ್, ರಜತ್ ಆರ್. ಮೋಹನ್, ನೋಡೆಲ್ ಅಧಿಕಾರಿಯವರಾದ ಸಿದ್ದಪ್ಪ ತುಡುಬಿನ, ಶಿಶು ಅಭಿವೃದ್ಧಿ ಇಲಾಖೆಯ ಶಾಂಭವಿ. ಆರೋಗ್ಯ ಇಲಾಖೆಯ ಸುಂದರಿ ಬಿಆರ್, ಉಪಸ್ಥಿತರಿದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಎಸ್ ಕಾರ್ಯಕ್ರಮ ನಿರ್ವಹಿಸಿದರು.