Home Blog Page 67

ಮೂರನೇ ಆರೋಪಿ ಅಭಯ್ ಬಂಧನ:ಕಾರ್ಕಳ ಬಜರಂಗದಳ ಸಂಯೋಜಕ ಮನೀಶ್ ನಿಟ್ಟೆ ಪ್ರತಿಕ್ರಿಯೆ

0

ಮೂರನೇ ಆರೋಪಿ ಅಭಯ್ ಬಂಧನ:ಕಾರ್ಕಳ ಬಜರಂಗದಳ ಸಂಯೋಜಕ ಮನೀಶ್ ನಿಟ್ಟೆ ಪ್ರತಿಕ್ರಿಯೆ

ಕಾರ್ಕಳ ಗ್ಯಾಂಗ್ ರೇಪ್ ಪ್ರಕರಣದ ಮೂರನೇ ಆರೋಪಿ ಅಭಯ್ ಎಂಬಾತ ಬಜರಂಗದಳ ಸಂಘಟನೆಯ ಕಾರ್ಯಕರ್ತನಲ್ಲ. ಆತನಿಗೂ ಬಜರಂಗದಳಕ್ಕೂ ಯಾವುದೇ ರೀತಿಯ ಸಂಬಂಧ ಅಥವಾ ಸಂಪರ್ಕ ಇರುವುದಿಲ್ಲ. ಸಂಘಟನೆಯ ಹೆಸರು ಕೆಡಿಸಲು ಮಾಡುತ್ತಿರುವ ಅಪಪ್ರಚಾರಕ್ಕೆ ಸ್ಪಷ್ಟನೆ ನೀಡುವ ಅವಶ್ಯಕತೆಯೂ ನಮಗಿಲ್ಲ. ಆದರೆ ಆರೋಪಿ ಯಾರೇ ಇರಲಿ ಕಾನೂನಿನ ಶಿಕ್ಷೆಗೆ ಒಳಪಡಲೇಬೇಕು ಎಂದು ಕಾರ್ಕಳ ತಾಲೂಕು ಬಜರಂಗದಳ ಸಂಯೋಜಕ ಮನೀಶ್ ನಿಟ್ಟೆ ಹೇಳಿದ್ದಾರೆ.

ಇಲ್ಲಿ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ನಮಗೆ ಮುಖ್ಯವಲ್ಲ, ಸಂತ್ರಸ್ತ ಯುವತಿಗೆ ನ್ಯಾಯ ಸಿಗಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇ ಬೇಕು ಇದು ನಮ್ಮ ಆಗ್ರಹ. ಪೋಲಿಸ್ ತನಿಖೆಯಲ್ಲಿರುವ ಶಂಕಿತ ಆರೋಪಿಗಳು ತಪ್ಪಿತಸ್ಥರು ಎಂದಾದಲ್ಲಿ ಅವರ ವಿರುದ್ಧವೂ ಅತ್ಯಂತ ಪ್ರಬಲ ಕಾಯ್ದೆ ಮೂಲಕ ಕೇಸ್ ದಾಖಲಾಗಬೇಕು. ಇಂತಹ ಅಮಾನುಷ ಕೃತ್ಯಗಳು ಕಾರ್ಕಳದಲ್ಲಿ ಇಲ್ಲಿಗೆ ಕೊನೆಯಾಗಬೇಕು ಮತ್ತು ಈ ಪ್ರಕರಣದಲ್ಲಿ ನೀಡುವ ಕಾನೂನಿನ ಶಿಕ್ಷೆ ಎಲ್ಲರಿಗೂ ಪಾಠವಾಗಬೇಕು. ಹಿಂದೂ ಎಂದ ಮಾತ್ರಕ್ಕೆ ಆತ ಸಂಘಟನೆಯ ಕಾರ್ಯಕರ್ತನಾಗುವುದಿಲ್ಲ. ಈ ಪ್ರಕರಣದಲ್ಲಿ ಬಜರಂಗದಳದ ನಿಲುವು ಸ್ಪಷ್ಟವಾಗಿದೆ ಎಂದಿದ್ದಾರೆ.

ಕಾರ್ಕಳ:ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಭಿನವ ಭಾರತ ಕಾರ್ಕಳ ಮನವಿ

0

ಕಾರ್ಕಳ:ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಭಿನವ ಭಾರತ ಕಾರ್ಕಳ ಮನವಿ

ಕಾರ್ಕಳ ಸೇರಿ ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಅತಿ ಶೀಘ್ರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯ ಜನತೆ ನೆಮ್ಮದಿಯ ಜೀವನ ಸಾಗಿಸುವಂತೆ ಹಾಗೂ ದೇಶದ ಯುವ ಜನತೆ ಸುಶಿಕ್ಷಿತ ಸಭ್ಯ ನಾಗರೀಕರಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಕಾರ್ಕಳ ಪೊಲೀಸ್ ಅಧಿಕಾರಿಗಳಿಗೆ ಅಭಿನವ ಭಾರತ ಕಾರ್ಕಳ ವತಿಯಿಂದ ಮನವಿ ಸಲ್ಲಿಸಲಾಯಿತು.

ನಮ್ಮ ದೇಶದ ಸುದೃಢ ಆಸ್ತಿಯೆಂದರೆ ಈ ದೇಶದ ಯುವ ಜನತೆ.ದೇಶವನ್ನು ಅಸ್ಥಿರಗೊಳಿಸಲು ದೇಶ ವಿರೋಧಿಗಳು ಮಾಡುವ ಷಡ್ಯಂತ್ರದ ಮೊದಲ ಭಾಗವೇ ಯುವ ಜನತೆಯ ದಾರಿ ತಪ್ಪಿಸಿ ಅವರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವುದು.

ದೇಶದ ಎಲ್ಲೆಡೆ ಇರುವ ಈ ಮಾದಕ ದ್ರವ್ಯಗಳ ಮಾಫಿಯಾ ಕರ್ನಾಟಕದ ಕರಾವಳಿ ಭಾಗದಲ್ಲಿ ಬೇರೂರಿ ಹಲವು ದಶಕಗಳೇ ಕಳೆದರೂ ಸಂಬಂಧ ಪಟ್ಟ ಇಲಾಖೆಗಳಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಪರಿಣಾಮಕಾರಿ ಕ್ರಮ ಆಗಿಲ್ಲ.ಈ ಕಾರಣದಿಂದಾಗಿಯೇ ಈ ಡ್ರಗ್ಸ್ ಮಾಫಿಯಾ ಕಾರ್ಕಳ ಎಂಬ ಸುಶಿಕ್ಷಿತ ಸಭ್ಯ ತಾಲ್ಲೂಕಿನಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿ ದೇಶದ ಭವಿಷ್ಯದ ಸಶಕ್ತ ಪ್ರಜೆಗಳನ್ನು ನಿರ್ವೀಯರನ್ನಾಗಿಸಿ, ಅವರನ್ನು ದೇಶದ್ರೋಹಿ ಕೃತ್ಯಗಳಿಗೆ ಬಳಸಿಕೊಳ್ಳುವಂತಹ ಮಟ್ಟಕ್ಕೆ ಬೆಳೆದಿರುವುದು ಬಹಳ ಆತಂಕಕ್ಕೆ ಕಾರಣವಾಗಿದೆ.

ಅದೂ ಅಲ್ಲದೆ ಮುಗ್ಧ ಯುವತಿಯರಿಗೆ ಗಾಂಜಾ ಡ್ರಗ್ಸ್ ಇನ್ನಿತರ ಮಾದಕ ವಸ್ತುಗಳನ್ನು ಮೋಸದಿಂದ ಅಥವಾ ಬಲವಂತದಿಂದ ತಿನ್ನಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ, ಅವರ ಅಶ್ಲೀಲ ಚಿತ್ರಗಳನ್ನು ತೆಗೆದು ನಿರಂತರ ದೈಹಿಕ ಶೋಷಣೆ ಮಾಡುತ್ತಿರುವ ಹಲವಾರು ಘಟನೆಗಳು ನಡೆಯುತ್ತಿದ್ದು, ಮರ್ಯಾದೆಗೆ ಅಂಜಿ ಈ ಘಟನೆಗಳು ಎಲ್ಲೂ ಬೆಳಕಿಗೆ ಬರುತ್ತಿಲ್ಲ.

ಮಾದಕ ದ್ರವ್ಯ ಮಾರಾಟ ಸಾಗಾಟ, ಸೇವನೆಯ ವಿರುದ್ದ ತುರ್ತು ಕ್ರಮ ಕೈಗೊಳ್ಳಲು ಇರುವ ಪ್ರತ್ಯೇಕ ವಿಜಿಲೆನ್ಸ್ ಘಟಕವನ್ನು ಸಕ್ರೀಯ ಗೊಳಿಸುವುದು,ಮಾದಕ ದ್ರವ್ಯದ ಬಗ್ಗೆ ದೂರು ನೀಡಲು ಟೋಲ್ ಫ್ರೀ ನಂಬರ್ ನೀಡುವುದು ,ಪ್ರತಿ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ಧ ದೂರು, ಮಾಹಿತಿ ನೀಡಲು ದೂರು ಪೆಟ್ಟಿಗೆ ಸ್ಥಾಪಿಸುವುದು, ಹಳೆಯ ಡ್ರಗ್ಸ್ ಪೆಡ್ಲರ್ ಗಳನ್ನು ಪ್ರತಿ ತಿಂಗಳು ಕರೆಯಿಸಿ ಪೆರೇಡ್ ನಡೀಸಬೇಕು.

ಕಾರ್ಕಳ ಸೇರಿ ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಅತಿ ಶೀಘ್ರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯ ಜನತೆ ನೆಮ್ಮದಿಯ ಜೀವನ ಸಾಗಿಸುವಂತೆ ಹಾಗೂ ದೇಶದ ಯುವ ಜನತೆ ಸುಶಿಕ್ಷಿತ ಸಭ್ಯ ನಾಗರೀಕರಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಎಂದು ಮನವಿ ಮಾಡಲಾಗಿದೆ.

ಡಾ. ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹೋರಾಟಕ್ಕೆ ಸಿಕ್ಕಿತು ಯಶಸ್ಸು ಹೋರಾಟಕ್ಕೆ ಬೆಚ್ಚಿ ಹಣ ನೀಡುವುದಾಗಿ ಕಂಪನಿ ಹೇಳಿಕೆ

0

ಡಾ. ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹೋರಾಟಕ್ಕೆ ಸಿಕ್ಕಿತು ಯಶಸ್ಸು

ಹೋರಾಟಕ್ಕೆ ಬೆಚ್ಚಿ ಹಣ ನೀಡುವುದಾಗಿ ಕಂಪನಿ ಹೇಳಿಕೆ

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆ ಯ ಕಾಮಗಾರಿಯ ಗುತ್ತಿಗೆದಾರರು ಸ್ಥಳೀಯ ಹಲವಾರು ಮಂದಿಗೆ ಮಾಡಿದ ವಂಚನೆಯನ್ನು ಸರಿ ಪಡಿಸುವ ನಿಟ್ಟಿನಲ್ಲಿ ಡಾ ರವೀಂದ್ರ ಶೆಟ್ಟಿಯವರ ನೇತೃತ್ವದ ಪಟ್ಟು ಬಿಡದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರೂ 385 ಕೋಟಿ ವೆಚ್ಚದಲ್ಲಿ 35 ಕಿ ಮಿ ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ ಮಾಡಲಾಗಿತ್ತು.ಈ ಟೆಂಡರ್ ನ್ನು ಮಹಾರಾಷ್ಟ್ರದ ನಾಗ್ಪುರದ ಡಿ ಪಿ ಜೈನ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

ಈ ಕಂಪನಿಯು ಈ ರಸ್ತೆಯ ಅಭಿವೃದ್ಧಿ ಕಾರ್ಯವನ್ನು 2023ನೇ ಸಾಲಿನಿಂದ ಆರಂಭ ಮಾಡಿತ್ತು. ಈ ಸಂದರ್ಭದಲ್ಲಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪೆಟ್ರೋಲ್ ಬಂಕ್ ಗಳಿಂದ ಡೀಸೆಲ್, ಪೆಟ್ರೋಲ್, ಕ್ರಷರ್ ಗಳಿಂದ ಜಲ್ಲಿ, ಜೀನಸು ಅಂಗಡಿಗಳಿಂದ ಆಹಾರ ಸಾಮಗ್ರಿ, ಸ್ಟೇಷನರಿ ಸಾಮಗ್ರಿ, ಪೀಟೋಪಕರಣ ಹೀಗೇ ಹಲವಾರು ಸಾಮಗ್ರಿಗಳನ್ನು ಈ ಕಂಪನಿ ಸಾಲದ ರೂಪದಲ್ಲಿ ಪಡೆದಿತ್ತು.ಇದೊಂದು ದೊಡ್ಡ ಕಂಪನಿ ಎಂದು ಭಾವಿಸಿ ಎಲ್ಲರೂ ಸಾಮಗ್ರಿಗಳನ್ನು ನೀಡಿದ್ದರು.

ವಂಚನೆಯ ಸುಳಿವು
ತಾವು ನೀಡಿದ ಸಾಮಗ್ರಿಗಳ ಬಿಲ್ಲು ಈ ತಿಂಗಳಿಗೆ ಪಾವತಿ ಆಗುತ್ತೆ, ಮುಂದಿನ ತಿಂಗಳು ಪಾವತಿ ಆಗುತ್ತೆ ಎಂದು ಕಾದು ಕೂತವರಿಗೆ ಹಣ ಸಿಗಲೇ ಇಲ್ಲ. ಈ ಕಂಪನಿಯ ಯಾರಲ್ಲಿ ಕೇಳಿದರು ಕೂಡ ಹಣ ಮಾತ್ರ ಬರಲೇ ಇಲ್ಲ. ಕೆಲವರು ನಾಗ್ಪುರದಲ್ಲಿರುವ ಡಿ ಪಿ ಜೈನ್ ಕಂಪನಿ ಗೆ ತೆರಳಿ ತಮ್ಮ ಹಣ ನೀಡುವಂತೆ ಕೇಳಿದರೂ ಅವರನ್ನು ತೆಪ್ಪಗೆ ಹಿಂದಕ್ಕೆ ಕಳುಹಿಸಲಾಗಿತ್ತು. ಇದರಿಂದ ಜನ ಹೈರಾಣ ಆಗಿ ಹೋಗಿದ್ದರು. ತಮ್ಮ ಸಮಸ್ಯೆ ಪರಿಹಾರ ಮಾಡೋದು ಹೇಗೆ ಎಂದೇ ಯಾರಿಗೂ ತಿಳಿಯಲಿಲ್ಲ.

ಡಾ. ರವೀಂದ್ರ ಶೆಟ್ಟಿ ಎಂಟ್ರಿ
ಈ ವಂಚನೆಯ ಮಾಹಿತಿಯನ್ನು ಕ್ರಷರ್ ಮಾಲಕರೋರ್ವರು ರಾಜ್ಯ ಕ್ರಷರ್ ಮಾಲಕರ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಯವರಲ್ಲಿ ತಿಳಿಸಿ ತಮ್ಮ ಸಮಸ್ಯೆ ಪರಿಹಾರ ಮಾಡುವಂತೆ ಮನವಿ ಮಾಡಿದರು.

45 ಜನರ ತಂಡ ನಾಗ್ಪುರಕ್ಕೆ
ಈ ಬಗ್ಗೆ ಹೋರಾಟದ ಅವಶ್ಯಕತೆ ಮನಗಂಡ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಸುಮಾರು 45 ಜನರ ತಂಡವನ್ನು ನಾಗ್ಪುರಕ್ಕೆ ಕೊಂಡೊಯ್ಡರು.

ನೆಲದಲ್ಲಿ ಕುಳಿತು ಪ್ರತಿಭಟನೆ
ನಾಗ್ಪುರಕ್ಕೆ ತೆರಳಿದ ಈ ತಂಡವು ಡಿ ಪಿ ಜೈನ್ ಕಂಪನಿಗೆ ಹೋಗಿ ವಂಚನೆ ಮಾಡಿದ ಹಣ ನೀಡುವಂತೆ ಮನವಿ ಮಾಡಿತು.ಆದರೆ ಅಲ್ಲಿ ಕೂಡ ಕಂಪನಿ ಸಿಬ್ಬಂದಿಗಳು ಮಾತ್ರ ಇದ್ದು ಹಣ ನೀಡುವ ನಿಟ್ಟಿನಲ್ಲಿ ಯಾವುದೇ ಮಾತುಕತೆ ಮಾಡಲಿಲ್ಲ. ಇದರಿಂದ ಕೆರಳಿದ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಹಾಗೂ ತಂಡವು ಕಚೇರಿಯೊಳಗೆ ನೆಲದಲ್ಲಿ ಕುಳಿತು ಧರಣಿ ಆರಂಭ ಮಾಡಿತು.

ಬೆಳಗ್ಗೆ ಆರಂಭ ಆದ ಧರಣಿ ನಿರತರ ಮನ ಒಲಿಸಲು ಕಂಪನಿ ಪ್ರಯತ್ನ ಪಟ್ಟರು ಕೂಡ ಎಲ್ಲರ ಹಣ ಸಿಗೋವರೆಗೂ ತಾವು ಕದಲೋದಿಲ್ಲ ಎಂದು ಡಾ. ರವೀಂದ್ರ ಶೆಟ್ಟಿ ಪಟ್ಟು ಬಿಡಲೇ ಇಲ್ಲ.

ಸುಮಾರು ಮದ್ಯಾಹ್ನ ಹೊತ್ತಿಗೆ ಈ ಕಂಪನಿಯ ಮುಖ್ಯಸ್ಥರು ಡಾ ರವೀಂದ್ರ ಶೆಟ್ಟಿಯವರ ಬಳಿ ಬಂದು ಮಾತುಕತೆ ಮಾಡುವಂತೆ ತಿಳಿಸಿದರು. ಆದ್ರೆ ವಂಚನೆಗೆ ಒಳಗಾದವರಿಗೆ ಹಣ ಕೊಡದಿದ್ದರೆ ಎಷ್ಟು ದಿನ ಆದರೂ ತಾವು ಇಲ್ಲಿಂದ ಕದಲೋದಿಲ್ಲ ಎಂದು ತಿಳಿಸಲಾಯಿತು.

ಬಿಜೆಪಿ ಶಾಸಕ ಮೋಹನ್ ಮತೆ ಸ್ಥಳಕ್ಕೆ
ಈ. ವಿಚಾರದ ಮಾಹಿತಿ ತಿಳಿದ ನಾಗ್ಪುರದ ಶಾಸಕರಾದ ಮೋಹನ್ ಮತೆ ಸ್ಥಳಕ್ಕೆ ಆಗಮಿಸಿ ಡಾ. ರವೀಂದ್ರ ಶೆಟ್ಟಿಯವರ ಮನ ಒಳಿಸುವ ಪ್ರಯತ್ನ ಮಾಡಿದರು.ಬಳಿಕ ಅಲ್ಲಿಂದ ಶಾಸಕರು ಕರ್ನಾಟಕದ ಬಿಜೆಪಿ ಜನ ಪ್ರತಿನಿಧಿಗಳನ್ನು ಹಾಗೂ ನಾಗ್ಪುರದಲ್ಲಿರುವ ಸುರತ್ಕಲ್ ನ ನವೀನ್ ಶೆಟ್ಟಿಯವರ ಮುಖಾಂತರ ಹೋರಾಟಗಾರರ ಮನ ಒಲಿಸುವ ಪ್ರಯತ್ನ ಮಾಡಲಾಯಿತು

ಬಳಿಕ ಶಾಸಕ ಮೋಹನ್ ಮತೆಯವರು ಡಿ ಪಿ ಜೈನ್ ಕಂಪನಿಯ ಜೊತೆಗೆ ಡಾ. ರವೀಂದ್ರ ಶೆಟ್ಟಿಯವರ ಮೂಲಕ ಮಾತುಕತೆ ಮಾಡಿಸಿದರು. ವಂಚನೆ ಆದವರಿಗೆ ಹಣ ನೀಡಿದ್ರೆ ಮಾತ್ರ ತಾವೆಲ್ಲರೂ ಇಲ್ಲಿಂದ ತೆರಳುವುದಾಗಿ ತಿಳಿಸಲಾಯಿತು.

ಕೊನೆಗೆ ಡಿ ಪಿ ಜೈನ್ ಕಂಪನಿಯು ಹಣ ನೀಡುವುದಾಗಿ ಒಪ್ಪಿ ಕೊಂಡಿದೆ.ಡಾ ರವೀಂದ್ರ ಶೆಟ್ಟಿಯವರ ಪಟ್ಟು ಬಿಡದ ಹೋರಾಟದ ಜೊತೆಗೆ ಹಲವಾರು ಮಂದಿ ಜೊತೆಗೂಡಿ ಈ ಹೋರಾಟಕ್ಕೆ ಯಶಸ್ಸು ದೊರಕಿದೆ.

ಕಾರ್ಕಳ:ಪ್ರಕರಣದ ಮೂರನೇ ಆರೋಪಿ ಬೀಜೆಪಿ ಬೆಂಬಲಿಗ-ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ

0

ಸುನಿಲ್ ಕುಮಾರ್ ಗೆ ಮಾನ ಮರ್ಯಾದೆ ಉಳಿದಿದ್ದರೆ ರಾಜಿನಾಮೆ ನೀಡಲಿ-ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ

ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಇಂದು ಸಭೆ ನಡೆಸಿ ಮಾತಾಡಿದ ಸುನಿಲ್ ಕುಮಾರ್ ಜಿಹಾದಿ ಕೃತ್ಯ,ಕಾಂಗ್ರೆಸ್ ಸರಕಾರದ ವೈಫಲ್ಯ ಎಂಬುದಾಗಿ ಹೇಳಿದ್ದರು.ಇದೀಗ ಅವರದೇ ಬೆಂಬಲಿಗ ಕಾರ್ಕಳದ ಅಭಯ್ ಎನ್ನುವ ಬಿಜೆಪಿ ಕಾರ್ಯಕರ್ತ ಭಂದನವಾಗಿದ್ದು, ಕಾರ್ಕಳ ಶಾಸಕರು ಇದಕ್ಕೇನು ಉತ್ತರ ಕೊಡುತ್ತಾರೆಂದು ಸ್ಫಷ್ಟಪಡಿಸಬೇಕು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಹೇಳಿದ್ದಾರೆ.

ಆರೋಪಿಯು ಸುನಿಲ್ ಕುಮಾರ್ ಭಾವಚಿತ್ರವನ್ನು ತನ್ನ ಪೇಸ್ಬುಕ್‌ ಖಾತೆಯ ಕವರ್ ಫೋಟೊದಲ್ಲಿ ಹಾಕಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತಿದ್ದು, ಸುನಿಲ್ ಕುಮಾರ್ ಅವರು ಅವರ ಭಾಷಣದಲ್ಲಿ ಜಾತಿ ಜಾತಿ ಧರ್ಮಧರ್ಮ ಗಳ ಮಧ್ಯೆ ಕಂದಕವನ್ನು ನಿರ್ಮಿಸಿ ವೋಟ್ ಬ್ಯಾಂಕ್ ಗಳಿಸುವ ಹುನ್ನಾರ ಕೈಬಿಡಬೇಕು ಎಂದು ಅವರು ಹೇಳಿದ್ದಾರೆ.

ಹಿಂದು ಯುವಕರು ಮನಸ್ಸು ಮಾಡಿದರೆ ಹೆಣ ಇಡಲು ದೇಶದಲ್ಲಿ ಪ್ರಿಜ್ ಸಾಕಾಗಲಿಕ್ಕಿಲ್ಲ ಎಂದು ಪರೋಕ್ಷವಾಗಿ ಹಿಂದು ಯುವಕರಿಗೆ ಅತ್ಯಾಚಾರ ನಡೆಸಲು ಕರೆ ನೀಡಿದ ಸುನೀಲ್ ಕುಮಾರ್ ಅವರದ್ದು ಪೈಶಾಚಿಕ ಮನಸ್ಥಿತಿಯಾಗಿದೆ. ಒಬ್ಬ ಅತ್ಯಾಚಾರಿಗೂ ಇವರಿಗೂ ಏನು ವ್ಯತ್ಯಾಸ?

ಒಂದು ಅತ್ಯಾಚಾರವನ್ನು ಖಂಡಿಸುವ ಭರದಲ್ಲಿ, ಒಂದು ಅತ್ಯಾಚಾರದಿಂದ ರಾಜಕೀಯ ಲಾಭ ಪಡೆಯುವ ಭರದಲ್ಲಿ ಸಾವಿರಾರು ಅತ್ಯಾಚಾರಕ್ಕೆ ಸುನೀಲ್ ಕುಮಾರ್ ಕರೆ ನೀಡಿರುವುದನ್ನು ನಾಗರಿಕ ಸಮಾಜ ಖಂಡಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಆರೋಪಿ ಅಭಯ್ ದ್ದು ಎನ್ನಲಾದ ಫೇಸ್ ಬುಕ್ ಖಾತೆಯ ಫೋಟೋ

ಕಾರ್ಕಳದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು,ಮಾದಕ ದ್ರವ್ಯ ಕಡಿವಾಣ ಹಾಕಬೇಕು-ಡಾ. ರವೀಂದ್ರ ಶೆಟ್ಟಿ ಆಗ್ರಹ

0

ಕಾರ್ಕಳದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಫೆಡರೇಷನ್ ಆಫ್ ಕ್ವಾರಿ ಒನರ್ಸ್ ಅಸೋಸಿಯೇಷನ್ ನ ರಾಜ್ಯ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.

ಈ ದುಷ್ಕೃತ್ಯದಲ್ಲಿ ಪಾಲ್ಗೊಂಡವರಿಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲವಾದರೆ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಮಾದಕ ದ್ರವ್ಯ ಕಡಿವಾಣ:
ತನಿಖೆಯ ಪ್ರಾಥಮಿಕ ಹಂತದಲ್ಲಿ ಯುವತಿ ಮಾದಕ ದ್ರವ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ.ಜಿಲ್ಲೆಯಲ್ಲಿ ಸೇರಿದಂತೆ ರಾಜಯ್ಯದಲ್ಲಿ ರಾರೋಷವಾಗಿ ಮಾದಕ ದ್ರವ್ಯಗಳ ದಂದೆ ನಡೆಯುತ್ತಿದೆ.ಪೊಲೀಸರು ಇದರ ಹಿಂದೆ ಇರುವವರನ್ನು ಬಂಧಿಸಬೇಕು.ಯುವ ಸಮಾಜ ಮಾದಕ ದ್ರವ್ಯದ ವ್ಯಸನಿಗಳಾಗುತ್ತಿದ್ದರೆ.ಪೊಲೀಸರು  ಈ ಕೂಡಲೇ ಕಾರ್ಯ ಪ್ರವೃತ್ತರಾಗಿ ದಂಧೆಯನ್ನು ಮಟ್ಟಹಾಕಬೇಕು ಎಂದು ಅವರು ಹೇಳಿದ್ದಾರೆ.

ಗುತ್ತಿಗೆದಾರನಿಂದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ಡಾ.ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ

0

ಮಹಾರಾಷ್ಟ್ರದ ನಾಗ್ಪುರದಲ್ಲಿ ಡಾ.ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ

ಗುತ್ತಿಗೆದಾರನಿಂದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ

ಮಹಾರಾಷ್ಟ್ರ ರಾಜ್ಯದ ನಾಗ್ಪುರದಲ್ಲಿ ಇಂದು ಕರ್ನಾಟಕದ ಕ್ರಷರ್ ಮಾಲಕರೆಲ್ಲ ರಾಜ್ಯ ಕ್ರಷರ್ ಮಾಲಕರ ಸಂಘದ ಅಧ್ಯಕ್ಷ ಡಾ ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆಯ ಗುತ್ತಿಗೆದಾರರ ವಂಚನೆ ವಿರುದ್ದ ಹೋರಾಟ ನಡೆಸಿದ ಘಟನೆ ವರದಿ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಾಷ್ಟೀಯ ಹೆದ್ದಾರಿ 73ರ 35 ಕಿ ಮಿ ರಸ್ತೆಯನ್ನು ನಾಗ್ಪುರ ಮೂಲದ ಡಿ ಪಿ ಜೈನ್ ಇನ್ಫ್ರಾಸ್ಟ್ರಕ್ಚರ್ ಗೆ ಟೆಂಡರ್ ಆಗಿತ್ತು. ಈ ರಸ್ತೆಗೆ ರೂ 385 ಕೋಟಿ ಅನುದಾನ ಮಂಜೂರು ಆಗಿತ್ತು.

ಈ ರಸ್ತೆ ಗೆ ಬೇಕಾದ ಜಲ್ಲಿ ಹಾಗೂ ವಾಹನಗಳಿಗೆ ಪೆಟ್ರೋಲ್ ಹಾಗೂ ಡಿಸೇಲ್, ಜೀನಸು ಉತ್ಪನ್ನ, ಪ್ರಿಂಟಿಂಗ್, ಫರ್ನಿಚರ್, ಕಾರ್ಮಿಕರ ಕಂಟ್ರಾಕ್ಟರ್ ಗಳಿಗೆ ವೇತನ ಹಾಗೂ ಇನ್ನೂ ಹಲವಾರು ಮಂದಿ ವ್ಯವಸ್ಥೆಯನ್ನು ಒದಗಿಸಿದ್ದರು.

2023ನೇ ಸಾಲಿನಿಂದ ಈ ರಸ್ತೆ ಕಾಮಗಾರಿ ಆರಂಭ ಆಗಿತ್ತು. ಆದರೆ ಕಾಮಗಾರಿ ಮಾಡಲು ಕಚ್ಚಾ ಉತ್ಪನ್ನಗಳನ್ನು ನೀಡಿದವರಿಗೆ ಹಣ ನೀಡದೆ ಬಾಕಿ ಇರಿಸಿ ತೊಂದರೆನೀಡಲು ಡಿ ಪಿ ಜೈನ್ ಕಂಪನಿ ಆರಂಭ ಮಾಡಿತ್ತು.

ಈ ಬಗ್ಗೆ ಫೆಡರೇಷನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷಾರ್ ಅಸೋಸಿಯೇಷನ್ ನ ರಾಜ್ಯ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರಿಗೆ ತಮ್ಮ ತೊಂದರೆಯನ್ನು ತೊಂದರೆಗೊಳಗಾದ 75 ಮಂದಿ ದೂರು ಸಲ್ಲಿಸಿದ್ದರು.

ಈ ಸಮಸ್ಯೆ ಆಲಿಸಿದ ಡಾ. ರವೀಂದ್ರ ಶೆಟ್ಟಿಯವರು ಸೋಮವಾರ ನಾಗ್ಪುರದಲ್ಲಿ ತನ್ನ ನೇತೃತ್ವದಲ್ಲಿ ಪ್ರತಿಭಟನೆ ಆರಂಭ ಮಾಡಿ ಡಿ. ಪಿ ಜೈನ್ ಕಂಪನಿ ಗೆ ಮುತ್ತಿಗೆ ಹಾಕಿದ್ದಾರೆ.ಬಳಿಕ ನೆಲದಲ್ಲಿ ಕುಳಿತು ತಮ್ಮ ಮೌನ ಪ್ರತಿಭಟನೆ ಆರಂಭ ಮಾಡಿದ್ದಾರೆ. ಡಾ. ರವೀಂದ್ರ ಶೆಟ್ಟಿಯವರ ಜೊತೆಗೆ ತುಮಕೂರು, ರಾಮನಗರ, ಮೈಸೂರು, ಕಾಸರಗೋಡು, ದಾವಣಗೆರೆ,ದಕ್ಷಿಣ ಕನ್ನಡ ಫಳ್ನೀರ್, ಬಳ್ಳ ಮಂಜ ಸುರತ್ಕಲ್, ಜೋಕಟ್ಟೆ, ಪಕ್ಷಿ ಕೆರೆ,, ಪಡುಬಿದ್ರೆ ಯ ಗಣಿ ಮಾಲಕರು, ಪೆಟ್ರೋಲ್ ಬಂಕ್ ಮಾಲಕರು, ಜೀನಸು ಅಂಗಡಿ ಮಾಲಕರು, ಫರ್ನಿಚರ್ ಅಂಗಡಿ ಮಾಲಕರು ಮತ್ತಿತರರು ಭಾಗವಹಿಸಿದ್ದಾರೆ.

ಕಾರ್ಕಳ ಅತ್ಯಾಚಾರ ಪ್ರಕರಣ:ಸಂತ್ರಸ್ತೆ ರಕ್ತದಲ್ಲಿ ಮಾದಕ ವಸ್ತು ಅಂಶ ಇರುವುದು ದೃಢ

0

ಕಾರ್ಕಳ ಅತ್ಯಾಚಾರ ಪ್ರಕರಣ:ಸಂತ್ರಸ್ತೆ ರಕ್ತದಲ್ಲಿ ಮಾದಕ ವಸ್ತು ಅಂಶ ಇರುವುದು ದೃಢ

ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ರಕ್ತಪರೀಕ್ಷೆ ವರದಿ ಬಂದಿದ್ದು, ಈ ವರದಿಯ ಪ್ರಕಾರ ಆಕೆಯ ರಕ್ತದಲ್ಲಿ ಮಾದಕ ವಸ್ತು ಅಂಶ ಇರುವುದು ದೃಢಪಟ್ಟಿದೆ.

ಅತ್ಯಾಚಾರ ಎಸಗಿರುವ ಆರೋಪಿಗಳಾದ ಅಲ್ತಾಫ್ ಹಾಗೂ ಮತ್ತೋರ್ವ ಆರೋಪಿಯ ರಕ್ತ ಪರೀಕ್ಷೆಯಲ್ಲಿ ಮಾದಕ ಅಂಶ ಪತ್ತೆಯಾಗಿಲ್ಲ. ಯುವತಿ ರಕ್ತದಲ್ಲಿ ಪಾಸಿಟಿವ್‌ ಬಂದಿರುವ ಬಗ್ಗೆ ಆರೋಪಿ ಅಲ್ತಾಫ್ ನನ್ನು ವಿಚಾರಣಗೆ ಒಳಪಡಿಸಲಾಗಿದ್ದು, ಅವನು ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಇದನ್ನೇ ಆ ಹುಡುಗಿ ತೆಗೆದುಕೊಂಡಿದ್ದು ಎಂದು ತಿಳಿಸಿದ್ದಾನೆ.

ಬಳಿಕ ಆರೋಪಿ ಅಲ್ತಾಫ್ ತೋರಿಸಿದ ಪುಡಿಯನ್ನು ಪೊಲೀಸರು ಎಫ್ಎಸ್‌ಎಲ್‌ ಗೆ ಕಳುಹಿಸಲಾಗಿದ್ದು, ಅದು ಯಾವ ಡ್ರಗ್ಸ್‌ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಸಂತ್ರಸ್ತೆಯ ರಕ್ತದಲ್ಲಿ ಪತ್ತೆಯಾಗಿರುವುದು ಇದರದ್ದೇ ಅಂಶವೇ ಎಂಬ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ.ಅರುಣ್‌ ತಿಳಿಸಿದ್ದಾರೆ.

ಒಬ್ಬ ಹೆಣ್ಣಿನ ಮೇಲಿನ ಅತ್ಯಾಚಾರ ಇಡಿ ಸ್ತ್ರೀ ಸಮಾಜದ ಮೇಲಿನ ಶೋಷಣೆ.-ಅನಿತಾ ಡಿಸೋಜ

0

ಒಬ್ಬ ಹೆಣ್ಣಿನ ಮೇಲಿನ ಅತ್ಯಾಚಾರ ಇಡಿ ಸ್ತ್ರೀ ಸಮಾಜದ ಮೇಲಿನ ಶೋಷಣೆ.

ಅನಿತಾ ಡಿಸೋಜ, ಅಧ್ಯಕ್ಷರು ಬ್ಲಾಕ್ ಮಹಿಳಾ ಕಾಂಗ್ರೆಸ್, ಕಾರ್ಕಳ.

ಒಂದು ಹೆಣ್ಣಿನ ಮೇಲಿನ ಅತ್ಯಾಚಾರ ಸ್ತ್ರೀ ಸಮಾಜದ ಮೇಲಿನ ಶೋಷಣೆ. ಒಬ್ಬ ಮಹಿಳೆಯಾಗಿ ನಾನು ಇದನ್ನು ಖಂಡಿಸುತ್ತೇನೆ.
ಅತ್ಯಾಚಾರ ಅನ್ನುವುದು ಜಾತಿ ಆಧಾರಿತ, ಧರ್ಮ ಆಧಾರಿತ, ಕುಲ ಆಧಾರಿತ ಅಲ್ಲಾ.

ಇದು ಪುರುಷ ಸಮಾಜದ ಅವಿವೇಕದ, ಅತಿರೇಕದ ನಡೆ. ಇಲ್ಲಿ ತಾನು ಬಲಿಷ್ಠ ಅನ್ನುವ ಅಹಂ, ಅವನು ಮಾಡಿದ/ ತಾನು ಮಾಡಿದರೇನು ಅನ್ನುವ ಅವಿವೇಕ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಹೆದರಿಕೆ ಇಲ್ಲದಿರುವುದು ಕಾರಣ.

ಈ ಪಿಡುಗನ್ನು ಸಮಾಜದಿಂದ ಬೆರ್ಪಡಿಸಿ ದೂರಮಾಡುವ ನಾಶ ಪಡಿಸುವ ಅಗತ್ಯ ನಮ್ಮೆಲ್ಲರ ಮೇಲಿದೆ. ಮುಖ್ಯವಾಗಿ ಮನೆ ಹಾಗೂ ಶಾಲೆಯಲ್ಲಿ ಮಾನವೀಯತೆ ಮತ್ತು ಸಂಸ್ಕಾರದ ಪಾಠ ಬಲಿಷ್ಠವಾಗಬೇಕು. ಸಮಾಜ ಆರೋಪಿಯ ಜಾತಿ, ಧರ್ಮ, ಸಮಾಜದಲ್ಲಿನ ಪ್ರತಿಷ್ಠೆ ನೋಡಿ ತುಲನೆ ಮಾಡುವುದನ್ನು ನಿಲ್ಲಿಸಬೇಕು. ಎಲ್ಲಿಕ್ಕಿಂತ ಮುಖ್ಯವಾಗಿ ಸರಕಾರ ತ್ವರಿತ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ಘೋಷಿಸಬೇಕು.

ಒಟ್ಟಾರೆಯಾಗಿ ಈ ಅತ್ಯಾಚಾರ ಅನ್ನುವ ಪಿಡುಗನ್ನು ಸಮಾಜದಿಂದ ದೂರ ಮಾಡುವ ಜವಾಬ್ದಾರಿಯೊಂದಿಗೆ ಸಂಸ್ರಸ್ತೆಯನ್ನು ಪ್ರೀತಿಸುವ ಗೌರವಿಸುವ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ.

ಕಾರ್ಕಳ:ಯುವತಿ ಮೇಲೆ ಅತ್ಯಾಚಾರ ಪ್ರಕರಣ-ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿ

ಕಾರ್ಕಳ:ಯುವತಿ ಮೇಲೆ ಅತ್ಯಾಚಾರ ಪ್ರಕರಣ-ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿ

0

ಕಾರ್ಕಳ:ಯುವತಿ ಮೇಲೆ ಅತ್ಯಾಚಾರ ಪ್ರಕರಣ-ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿ

ಇತ್ತೀಚೆಗೆ ವರದಿಯಾಗಿದ್ದ ಕಾರ್ಕಳದಲ್ಲಿನ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗಳನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಈ ಬಗ್ಗೆ ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ , ಪ್ರಮುಖ ಆರೋಪಿಗಳಾದ ಅಲ್ತಾಫ್, ರಿಚರ್ಡ್ನನ್ನು ಪೊಲೀಸ್ ಕಸ್ಟಡಿಗೆ ಕಾರ್ಕಳ ನಗರಠಾಣೆ ಪೊಲೀಸರು ಕೇಳಿದ್ದರು. ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿ ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ಪೊಲೀಸ್ ತನಿಖೆಯಲ್ಲಿರುವ ಮೂರ್ತಿಯನ್ನು ಶಿಲ್ಪಿಗೆ ವಾಪಾಸ್ ನೀಡಲು ಹೈಕೋಟ್೯ ನಕಾರ. ಮುಂದುವರೆದ ಪರಶುರಾಮ ಮೂರ್ತಿ ವಿವಾದ.

0

ಪೊಲೀಸ್ ತನಿಖೆಯಲ್ಲಿರುವ ಮೂರ್ತಿಯನ್ನು ಶಿಲ್ಪಿಗೆ ವಾಪಾಸ್ ನೀಡಲು ಹೈಕೋಟ್೯ ನಕಾರ.

ಮುಂದುವರೆದ ಪರಶುರಾಮ ಮೂರ್ತಿ ವಿವಾದ.

ಬೈಲೂರು ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ ಪರಶುರಾಮ ಮೂರ್ತಿಯ ವಿಚಾರಕ್ಕೆ ಸಂಭಂದಿಸಿದಂತೆ ಕಾರ್ಕಳ ಪೊಲೀಸರು ವಶಪಡಿಸಿಕೊಂಡಿರುವ ಪರಶುರಾಮ ಮೂರ್ತಿಯನ್ನು ಆರೋಪಿತರಿಗೆ ವಾಪಸ್ ನೀಡಲು ಹೈಕೋರ್ಟ್ ನಿರಾಕರಿಸಿದೆ.

ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಆರೋಪಿತರ ಪರವಾಗಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆದಿದ್ದು,ಕಾರ್ಕಳ ಪೋಲಿಸರ ತನಿಖೆಯ ಹಂತದಲ್ಲಿಯುವ ಮೂರ್ತಿಯ ಬಿಡಿಭಾಗಗಳನ್ನು ಮರಳಿ ಒಪ್ಪಿಸುವಂತೆ ಕೇಳಿಕೊಳ್ಳಲಾಗಿತ್ತು.

ಈ ಬಗ್ಗೆ ದೂರುದಾರರಾಗಿರುವ ನಲ್ಲೂರು ಕೃಷ್ಣ ಶೆಟ್ಟಿ ಯವರ ಪರ ವಾದಿಸಿದ್ದ ನ್ಯಾಯವಾದಿ ಶ್ರೀಕಾಂತ್.ವಿ.ಕೆ. ಆಕ್ಷೇಪ ವ್ಯಕ್ತಪಡಿಸಿ ಅರ್ಜಿದಾರರು ಕೇಳಿಕೊಂಡಂತೆ ಮೂರ್ತಿಯನ್ನು ಮರು ವಶಕ್ಕೆ ನೀಡದಂತೆ ಕೇಳಿಕೊಂಡಿದ್ದರು.

ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಮೂರ್ತಿಯ ಬಿಡಿಭಾಗವನ್ನು ಅರ್ಜಿದಾರ ಕೃಷ್ಣ ನಾಯ್ಕ್ ರವರಿಗೆ ನೀಡಲು ನಿರಾಕರಿಸಿ ಆದೇಶ ಹೊರಡಿಸಿದೆ.ಮೂರ್ತಿ ವಿಚಾರದಲ್ಲಿ ಗೊಂದಲ ಇನ್ನು ಮುಂದುವರಿದಿದ್ದು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು ಕುತೂಹಲವನ್ನು ಹೆಚ್ಚಿಸಿದೆ.