Thursday, May 16, 2024

ಕಾರ್ಕಳ:”ಯುವಕರಲ್ಲಿ ಹೆಲ್ಮೆಟ್ ಧಾರಣೆಯ ಬಗ್ಗೆ ಜಾಗೃತಿ ಇರಲಿ”-ಶೈಲೇಂದ್ರ ರಾವ್

Homeಕಾರ್ಕಳಕಾರ್ಕಳ:"ಯುವಕರಲ್ಲಿ ಹೆಲ್ಮೆಟ್ ಧಾರಣೆಯ ಬಗ್ಗೆ ಜಾಗೃತಿ ಇರಲಿ"-ಶೈಲೇಂದ್ರ ರಾವ್

ಕಾರ್ಕಳ ಪ್ರಸ್ತುತ ದಿನಗಳಲ್ಲಿ ಯುವಕರು ಸಂಚಾರಿ ನಿಯಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷ ಧೋರಣೆ ತಾಳುತ್ತಿದ್ದು ಯುವಕರಲ್ಲಿ ಹೆಲ್ಮೆಟ್ ಧಾರಣೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂಬುದಾಗಿ ರೋಟರಿ ಜಿಲ್ಲೆ 3182ರ ವಲಯ 5ರ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಅವರು ಅಭಿಪ್ರಾಯ ಪಟ್ಟರು.

ಅವರು ಕಾರ್ಕಳದ ರೋಟರಿ ಬಾಲ ಭವನದಲ್ಲಿ ಜರಗಿದ ರೋಟರಾಕ್ಟ್ ಕ್ಲಬ್ ಕಾರ್ಕಳದ 2023 – 24ನೇ ಸಾಲಿನ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರೋಟರಿ ಜಿಲ್ಲೆ 3182 ರ ರೋಟರಾಕ್ಟ್ ಜಿಲ್ಲಾ ಸಭಾಪತಿಯವರಾದಸುಬ್ರಹ್ಮಣ್ಯ ಬಾಸ್ರಿ ಇವರು ಯುವಕರು ಸ್ನೇಹ ಹಾಗೂ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೋಟರಿ ಜಿಲ್ಲೆ 3182 ರ ಜಿಲ್ಲಾ ಪ್ರತಿನಿಧಿವರಾದ ಶ್ರುತಿ ಶೆಣೈ ಇವರು ಜಿಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. 2023- 24 ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿಶ್ಚಿತ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಸುನಿಲ್ ನಾಯಕ್ ಮತ್ತು ಸಭಾಪತಿಯಾಗಿಶಶಿಕಲಾ ಹೆಗ್ಡೆ ಇವರು ಅಧಿಕಾರ ಸ್ವೀಕರಿಸಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಿಶ್ಚಿತ್ ಶೆಟ್ಟಿ ಇವರು ತಮ್ಮ ಒಂದು ವರ್ಷಗಳ ಅವಧಿಯ ಕಾರ್ಯಯೋಜನೆಯನ್ನು ಹಾಗೂ ತಮ್ಮ ತಂಡವನ್ನು ಪರಿಚಯಿಸಿದರು.ಈ ಸಂದರ್ಭದಲ್ಲಿ ತಂಡಕ್ಕೆ ಹೊಸದಾಗಿ ಐದು ಜನ ಸದಸ್ಯರು ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ವಿದ್ಯಾರ್ಥಿವೇತನ ವಿತರಣೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಓರ್ವ ವಿದ್ಯಾರ್ಥಿಗೆ ಕ್ರೀಡಾಪರಿಕರಗಳನ್ನು ನೀಡಿ ಗೌರವಿಸಲಾಯಿತು. ಹಾಗೆಯೇ ಆಕಸ್ಮಿಕ ಅಪಘಾತದಲ್ಲಿ ತನ್ನ ಎಡಗೈಯನ್ನು ಕಳೆದುಕೊಂಡಂತ ಓರ್ವರಿಗೆ ಸಂಸ್ಥೆಯ ವತಿಯಿಂದ ಸುಮಾರು ಒಂದುವರೆ ಲಕ್ಷ ಮೌಲ್ಯದ ಕೃತಕ ಕೈಯನ್ನು ವಿತರಿಸಲಾಯಿತು.

ಹೆಲ್ಮೆಟ್ ಧಾರಣೆಯ ಕುರಿತು ಜಾಗೃತಿ ಮೂಡಿಸುವ, ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ತ್ರಿವರ್ಣ ಧ್ವಜದ ಮಹತ್ವ ಸಾರುವ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ 2022-23ನೇ ಸಾಲಿನ ಅಧ್ಯಕ್ಷರಾದ ಶಂಕರ್ ಕುಡ್ವ ಕಾರ್ಯದರ್ಶಿಯವರಾದ ಅನ್ವಿತಾ ಶರ್ಮಾ ಸಭಾಪತಿಯವರಾದ
ಹರ್ಷಿಣಿ ಇವರು ಉಪಸ್ಥಿತರಿದ್ದರು. ಪ್ರಶಾಂತ್ ಆಚಾರ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿ ಕರ್ತವ್ಯ ಜೈನ್ ಸಾಧಕರ ಪಟ್ಟಿಯನ್ನು ಓದಿದರು. ಶಂಕರ್ ಕುಡ್ವ ಇವರು ಸ್ವಾಗತಿಸಿ ಸುನಿಲ್ ನಾಯಕ್ ಇವರು ವಂದಿಸಿದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add