Home Blog Page 6

ಕೆ. ಎಮ್.ಇ.ಎಸ್ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಕೆ. ಎಮ್.ಇ.ಎಸ್ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕಾರ್ಕಳದ ಕೆ.ಎಮ್.ಇ.ಎಸ್.ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ದ ಆಚರಣೆಯನ್ನು ಕನ್ನಡಾಂಬೆಯ ಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸುವುದರ ಮೂಲಕ ಮಾಡಲಾಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಈ ಸಂದರ್ಭದಲ್ಲಿ ಮಾತನಾಡಿ ‘ಇಂದಿನ ಕಂಪ್ಯೂಟರ್ ಯುಗದಲ್ಲಿ ನಾವು ನಮ್ಮ ಮಾತೃ ಭಾಷೆಯಾದ ಕನ್ನಡವನ್ನೇ ಮರೆತು ಬಿಟ್ಟಿದ್ದೇವೆ. ನಮ್ಮ ಭಾವನಾತ್ಮಕ ಬೆಳವಣಿಗೆಗೆ ಕನ್ನಡ ಅತೀ ಅಗತ್ಯ. ಇಂದಿನ ನಮ್ಮ ಬದುಕು ಯಾಂತ್ರಿಕವಾಗಿ ಮಾರ್ಪಾಟಾಗಿದ್ದು ಭಾವನೆಗಳಿಗೆ ಬೆಲೆಯಿಲ್ಲದಿವುದರಿಂದ ಸಮಾಜದಲ್ಲಿ ಕ್ರೌರ್ಯ ತಾಂಡವಾಡುತ್ತಿದೆ. ಕನ್ನಡ ಮನಸ್ಸಿನ ಭಾಷೆ.1956 ರಿಂದ ನಮ್ಮ ರಾಜ್ಯ ಮೈಸೂರು ರಾಜ್ಯವಾಗಿದ್ದು, 1973 ನವೆಂಬರ್ ಒಂದರಂದು ಕರ್ನಾಟಕ ರಾಜ್ಯವಾಗಿ ಮರು ನಾಮಕರಣಗೊಂಡಿತು.

ಕರ್ನಾಟಕವು ಸಾಹಿತ್ಯ, ಸಂಸ್ಕೃತಿ, ಸಂಗೀತಗಳ ತವರೂರು. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ನೆಲೆಬೀಡು. ಶಿಲ್ಪಕಲೆಗಳ ಸುಂದರ ನಾಡು. ಇಂದು ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಸಂಕಲ್ಪವನ್ನು ನಾವೇಲ್ಲರೂ ಮಾಡಬೇಕಾಗಿದೆ.” ಎಂದರು.

ಪ್ರೌಢ ಶಾಲಾ ಮುಖ್ಯಸ್ಥೆ ಶ್ರಿಮತಿಯವರು ಮತ್ತು ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕಿಯವರು. ಕನ್ನಡಾಂಬೆಗೆ ಪುಷ್ಪಾಂಜಲಿಯನ್ನು ಸಮರ್ಪಿಸಿ ಗೌರವಾರರ್ಪಣೆಗೈದರು.

ಬಾಯಿಚಪಲಕ್ಕಾಗಿ ಪತ್ರಿಕಾ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿ-ರವೀಂದ್ರ ಮೊಯ್ಲಿ

0

ಕಾರ್ಕಳದ ಅಭಿವೃದ್ಧಿಗೆ ಅಡ್ದಗಾಲು ಹಾಕಬೇಡಿ

 

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಶಾಸಕರುಗಳು ಚುನಾಯಿತರಾಗಿದ್ದು, ಅವರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಪದವಿ ಅಲಂಕರಿಸಿದವರಿದ್ದಾಗ್ಯೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಕಂಡದ್ದು 2004 ರಲ್ಲಿ ವಿ ಸುನೀಲ್ ಕುಮಾರ್ ರವರು ಶಾಸಕರಾಗಿ ಆಯ್ಕೆಯಾದ ತರುವಾಯ ಎನ್ನುವುದು ನಿರ್ವಿವಾದ. ಕಾರ್ಕಳ ಕ್ಷೇತ್ರವನ್ನು ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವ್ರದ್ದಿಯತ್ತ ಕೊಂಡಯ್ಯಬೇಕೆಂಬ ನಿಟ್ಟಿನಲ್ಲಿ ಹಾಗೂ ಕಾರ್ಕಾಳದಲ್ಲಿ ಹತ್ತು ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮವಾದ ಶಿಕ್ಷಣ ನೀಡುತ್ತಿದ್ದರೂ ಆರ್ಥಿಕವಾಗಿ, ಜನಸಾಮಾನ್ಯರಿಗಾಗಿ ಅದರಲ್ಲಿಯು ಮುಖ್ಯವಾಗಿ ಮಹಿಳೆಯರನ್ನು ಶೈಕ್ಷಣಿಕವಾಗಿ ಮುನ್ನಲೆಗೆ ತರಬೇಕೆನ್ನುವ ಉದ್ದೇಶದಿಂದ, ಕಾರ್ಕಳವನ್ನು ಶೈಕ್ಷಣಿಕ ಹಬ್ ಆಗಿ ಮಾಡಬೇಕೆನ್ನುವ ಮಹದಾಸೆಯಿಂದ ಈ ಹಿಂದಿನ ಬಿಜೆಪಿ ನೇತ್ರತ್ವದ ಸರಕಾರ ಇದ್ದಾಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 40 ಸೀಟುಗಳ ಬಿ.ಎಸ್ಸಿ ನರ್ಸಿಂಗ್ ಕಾಲೇಜನ್ನು ಆ ನೂತನವಾಗಿ ಪ್ರಾರಂಭಿಸಲಾಗಿರುತ್ತದೆ. ಸದರಿ ಕಾಲೇಜು ವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸರಕಾರಿ ನರ್ಸಿಂಗ್ ಕಾಲೇಜು ಆಗಿರುತ್ತದೆ. ಆ ನಂತರ ಸರಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೂಲಭೂತ ಸೌಕರ್ಯಗಳಿಗೆ ಅನುದಾನ ಬರಿಸುವಂತೆ ಆದೇಶ ಹೊರಡಿಸಿರುತ್ತಾರೆ, ಆದರೆ ಕಾಂಗ್ರೆಸ್ ನೇತ್ರತ್ವದ ಸರಕಾರ ಅಧಿಕಾರಕ್ಕೆ ತಂದ ತರುವಾಯಿ ಈ ಎಲ್ಲ ಅಭಿವೃಧಿ ಯೋಜನೆಗಳು ಕುಂಠಿತವಾಗಿದ್ದು ಅದರಲ್ಲಿಯು ಶೈಕ್ಷಣಿಕ ಕ್ಷೇತ್ರಕ್ಕೂ ಅನುದಾನ ಸ್ಥಗಿತಗೊಳಿಸಿರುವುದು ವಿಪರ್ಯಾಸಕರ. ಈಗಿನ ಸರಕಾರವು ಈ ಹಿಂದಿನ ಸರಕಾರದ ಯೋಜನೆಗಳಿಗೆ ನೀಡಲಾಗುತ್ತಿರುವ ಅನುದಾನಗಳನ್ನು ತಡೆ ಹಿಡಿದಿದುದರ ಪರಿಣಾಮ ವಿಧ್ಯಾರ್ಥಿಗಳು ಅನುಭವಿಸುವಂತಾಗಿದೆ.

ಪ್ರಸ್ತುತ ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಮೂರು ಬ್ಯಾಚಿನಲ್ಲಿ ನೂರಕ್ಕೂ ಅಧಿಕ ವಿಧ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಈಗಾಗಲೇ ನರ್ಸಿಂಗ್ ಕಾಲೇಜು ನಿರ್ಮಾಣದ ಉದ್ದೇಶಕ್ಕೆ ಕಾರ್ಕಾಳ ಕಸಬಾ ಗ್ರಾಮದ 2 ಎಕ್ರೆ ಜಮೀನನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಲಾಗಿದೆ. ಪ್ರಸ್ತುತ ಕಾಂಗ್ರೆಸ್ ನೇತ್ರತ್ವದ ಸರಕಾರ ರಾಜ್ಯದಲ್ಲಿರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ವಿಧ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕಾರ್ಕಳದ ಶಾಸಕರು ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರಕಾರದ ಮಾನ್ಯ ವೈದ್ಯಕೀಯ ಸಚಿವರಾದ ಡಾ. ಶರಣ ಪ್ರಕಾಶ್ ಪಾಟಿಲ್, ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಸೌಧ ಬೆಂಗಳುರು ಇವರಿಗೆ ಹಲವಾರು ಬಾರಿ ಲಿಖಿತ ಪತ್ರ ಮುಖೇನ ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸಿಕೊಂಡು ಬರುತ್ತಿದ್ದಾಗಿಯೂ ಸರಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದಾಗಿಯೂ ಮಾನ್ಯ ಶಾಸಕರ ಸತತ ಪ್ರಯತ್ನದಿಂದಾಗಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಕಚೇರಿಯಿಂದ ಟಿಪ್ಪಣಿ ಪತ್ರ ಸರಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ರವಾನೆಯಾಗಿರುತ್ತದೆ. ಕಾರ್ಕಾಳ ನರ್ಸಿಂಗ್ ಕಾಲೇಜಿಗೆ ಅಗತ್ಯವಿರುವ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಬಗ್ಗೆಯು ಕೂಡ ಸಂಬಂಧಪಟ್ಟ ಸಚಿವರಿಗೆ ಮತ್ತು ಇಲಖೆಗೆ ಹಲವಾರು ಬಾರಿ ಪತ್ರ ಬರೆದು ಕೇಳಿಕೊಂಡಗಿಯು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಿಲ್ಲ. ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಭೋದನೆ ಮಾದಲು ಸುಮಾರು ಎಂಟು ಜನ ಶಿಕ್ಷಕರು ತಯಾರಿದ್ಯಾಗಿಯೂ ಅವರ ಹೆಸರನ್ನು ಸಂಬಧಪಟ್ಟವರಿಗೆ ನೀಡಿದ್ದರೂ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಈಗಾಗಲೇ ಶಾಸಕರ ಮುತುವರ್ಜಿಯಿಂದ ಕೆಲವು ಖಾಸಗಿ ಕಂಪೆನಿಗಳು ತಮ್ಮ ಸಿಎಸ್‌ಆರ್ ಫಂಡಿನ ಮೂಲಕ ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಿ ಸಹಕರಿಸಿರುತ್ತಾರೆ. ಮುಖ್ಯವಾಗಿ ಬೋಳಾಸ್ ಕಂಪೆನಿ ಸುಮಾರು 25೦೦೦೦/-, ಎಮ್ ಆರ್ ಪಿ ಎಲ್ ಸಂಸ್ಥೆ 8.13 ಲಕ್ಷ, ರೋಟರಿ ಸಂಸ್ಥೆ ಕಾರ್ಕಳ 62000 ಮತ್ತು ಆರೋಗ್ಯ ಇಲಾಖೆ 300000 ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲಾಗಿದೆ. ಸರಕಾರವು ಭೋದಕ ಮತ್ತು ಭೋದಕೇತರ ಸಿಬ್ಬಂದಿಯನ್ನು ನೇಮಕ ಮಾಡಿದರೆ ಹಾಗೂ ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಖಾಸಗಿ ಸಹಯೋಗದೊಂದಿಗೆ ಕಾಲೇಜಿನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆಯು ಕೂಡ ಶಾಸಕರು ಮುಂದಾಗಿದ್ದಾಗಿದ್ದರೂ ಕಾರ್ಕಳ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷರು ಮಾಹಿತಿ ಕೊರತೆಯಿಂದಾಗಿಯೋ ಅಥವಾ ಪ್ರಚಾರದ ತೆವಳಿನಿಂದಾಗಿಯೋ ಕಾರ್ಕಳದ ಶಾಸಕರನ್ನು ದೋಷಿಸುವ ಪ್ರೌವೃತ್ತಿಯಿಂದ ಪ್ರತ್ರಿಕ ಹೇಳಿಕೆ ನೀಡಿರುವುದು ಸಮಂಜಸವಲ್ಲ.

ಇನ್ನಾದರೂ ಕಾರ್ಕಳ ಕಾಂಗ್ರೆಸ್ ನಾಯಕರುಗಳು ಕಾರ್ಕಳದ ಅಭಿವೃದ್ಧಿಗೆ ಅಡ್ದಗಾಲು ಹಾಕದೇ ಅದರಲ್ಲಿಯು ಮುಖ್ಯವಾಗಿ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಕಾರ್ಕಳದ ನರ್ಸಿಂಗ್ ಕಾಲೇಜಿಗೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ತಮ್ಮ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಕಾರ್ಕಳದ ಅಭಿವೃದ್ಧಿಗೆ ಸಹಕಾರ ನೀಡಬೇಕ್ಕೆ ವಿನಹ ಬಾಯಿಚಪಲಕ್ಕಾಗಿ ಪತ್ರಿಕ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿ ಎಂದು ರವೀಂದ್ರ ಮೊಯ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ರೈಸ್ಟ್ ಕಿಂಗ್: ಸಂಭ್ರಮದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ

0

ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಡಬಿದಿರೆಯ ಶ್ರೀ ಧವಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಇತಿಹಾಸ ತಜ್ಞ ಪುಂಡಿಕೈ ಗಣಪಯ್ಯ ಭಟ್ ಅವರು ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಕನ್ನಡ ನಾಡು ನುಡಿಯ ಚಿಂತನೆಯೇ ಕನ್ನಡ ರಾಜ್ಯೋತ್ಸವ, ಕರ್ನಾಟಕದಲ್ಲಿ ಇಂಗ್ಲೀಷ್ ಮಾತನಾಡುವ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಜಾಗತಿಕ ಅರಿವಿಗೆ ಇಂಗ್ಲೀಷ್ ಬೇಕಿದ್ದರೂ ನಮ್ಮೊಳಗೆ ನಾವು ಕನ್ನಡ ಬಳಸಿ ಉಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಪೋಷಕರು ಮಕ್ಕಳನ್ನು ಆಂಗ್ಲಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಒಳ್ಳೆಯ ಸೌಲಭ್ಯ, ವ್ಯವಸ್ಥೆಗಳು ಇದ್ದರೆ ಪೋಷಕರು ಕನ್ನಡ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕನ್ನಡ ಭಾಷೆಗೆ ವಿದೇಶಿಯರ ಕೊಡುಗೆ ಅಪಾರವಾಗಿದೆ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮಿ ನಾರಾಯಣ ಕಾಮತ್ ಅವರು ಮಾತನಾಡಿ “ನಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆಡು ಭಾಷೆಯೇ ಅತ್ಯುತ್ತಮ ಸಾಧನ. ಕನ್ನಡ ಇತರ ಎಲ್ಲಾ ಭಾಷೆಗಳಿಗಿಂತ ವಿಭಿನ್ನ, ವಿಶಿಷ್ಟ ಶೈಲಿಯದ್ದಾಗಿದೆ. ನೂರಾರು ಭಾಷೆಗಳನ್ನು ಕಲಿತರೂ ಅನಿವಾರ್ಯ ಸಂದರ್ಭ ಹೊರತುಪಡಿಸಿ ಉಳಿದೆಲ್ಲಾ ಸಂದರ್ಭಗಳಲ್ಲಿ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು” ಎಂದು ಹೇಳಿದರು.

ಸಂಸ್ಥೆಯ ಪದವಿಪೂರ್ವ ವಿಭಾಗದ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪದವಿಪೂರ್ವ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಕನ್ನಡಾಭಿಮಾನ ಮೂಡಿಸುವ ಸಮೂಹ ಗಾಯನ ಕಾರ್ಯಕ್ರಮಗಳು ಜರುಗಿದವು. ಪ್ರಾಥಮಿಕ ಶಾಲಾ ಸಹಶಿಕ್ಷಕಿಯರಾದ ಶಕೀಲಾ ಸ್ವಾಗತಿಸಿ ಪ್ರಣೀತಾ ಅತಿಥಿಗಳನ್ನು ಪರಿಚಯಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕಿ ಶೈಲಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮ

0

 

ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮವನ್ನು ನಿಂಜೂರು ಶ್ರೀ ಗುರು ನಿತ್ಯಾನಂದ ಸಭಾಭವನದಲ್ಲಿ ನಡೆಸಲಾಯಿತು.

ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸುವುದರ ಮೂಲಕ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಕೆಲಸ, ಸಾಧನೆ ಹಾಗೂ ಸಮರ್ಪಣೆ ಮತ್ತು ಸೇವಾ ಮನೋಭಾವವನ್ನು ಸ್ಮರಿಸುತ್ತಾ ಗೌರವ ಸಮರ್ಪಿಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಎಂ ಶೆಟ್ಟಿ ಪಳ್ಳಿ ಅವರು ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ ಅವರ ಸಾದನೆಯ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ದಿನಕರ ಶೆಟ್ಟಿ, ಮಾಜಿ ಮಂಡಲ ಪ್ರಧಾನರಾದ ಚಂದ್ರಶೇಖರ ಶೆಟ್ಟಿ ಪಳ್ಳಿ, ಕಾರ್ಕಳ ತಾಲೂಕು ಗ್ಯಾರಂಟೀ ಸಮಿತಿ ಸದಸ್ಯ ಸಂತೋಷ ಶೆಟ್ಟಿ ಮಾಜಿ ಪ್ರಧಾನಿ ಅವರ ಸಾಧನೆ ಮತ್ತು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ನಿಂಜೂರು ಬೂತ್ ಅಧ್ಯಕ್ಷ ನೆಲ್ಸನ್ ಡಿಸೋಜ ಸ್ವಾಗತಿಸಿದರು, ನಿಂಜೂರು ಮಹಿಳಾ ಕಾಂಗ್ರೆಸ್ ಸಮಿತಿ ಬೂತ್ ಅಧ್ಯಕ್ಷ ಫ್ಲೋರಿನ್ ಧನ್ಯವಾದವಿತ್ತರು. ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಲ್ಸನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ

0

 

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಕಾರ್ಕಳ ನಗರ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಕಾರ್ಕಳ ಹಿರಿಯಂಗಡಿ ನಿವಾಸಿ, ಹಿರಿಯ ಕಾಂಗ್ರೆಸಿಗ ಶಂಕರ ದೇವಾಡಿಗ ಅವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಸಿದ್ದ ವಕೀಲರು ಹಿರಿಯ ಕಾಂಗ್ರೆಸಿಗರಾದ ಶೇಖರ ಮಡಿವಾಳ ಅವರು ಮಾತನಾಡಿ ಶತ್ರುರಾಷ್ಟ್ರ ಪಾಕಿಸ್ತಾನದ 90 ಸಾವಿರ ಸೈನಿಕರ ಶರಣಾಗತಿ ಮಾಡಿಸಿದ ಧೀರ ಪ್ರಧಾನಿ ಇಂದಿರಾ ಗಾಂಧಿಯವರ ದಿಟ್ಟತನವನ್ನು ಸ್ಮರಿಸುತ್ತಾ ಇಂದಿನ ದಿನಗಳಲ್ಲಿ ಆಡಳಿತಗಾರರು ಯಾವುದೋ ದೇಶದ ಅಧ್ಯಕ್ಷನ ಸೂಚನೆಗೆ ಯುದ್ದ ನಿಲ್ಲಿಸುವುದು ದೇಶದ ದುರಂತ ಎಂದರು. ತುರ್ತು ಪರಿಸ್ಥಿತಿಯನ್ನು ವಿರೋದಿಸುವವರು ಬಡವರ ವಿರೋದಿಗಳು, ತುರ್ತುಪರಿಸ್ಥಿತಿಯ ಬಗ್ಗೆ ದೇಶದ ಜನರಿಗೆ ನಿಜವಾಗಿಯೂ ಆಕ್ರೋಶವಿದ್ದರೆ ತುರ್ತುಪರಿಸ್ಥಿತಿ 18 ತಿಂಗಳ ನಂತರ ಮತ್ತೆ ಇಂದಿರಾ ಗಾಂಧಿಯವರನ್ನು ಈ ದೇಶದ ಜನ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರ ಪಾಲ್ ನಕ್ರೆ ಅವರು ಮಾತನಾಡಿ ದೇಶದ ಭೂ ಸಂಪತ್ತಿನ ಬಹುಪಾಲು ಭಾಗ ದೇಶದ 2‌ ಶೇಕಡಾ ಜನರಲ್ಲಿದ್ದು ಉಳಿದ‌ 98 ಶೇಕಡಾ ಜನರು ಭೂರಹಿತರಾಗಿದ್ದರು, ಭೂ ಸಂಪತ್ತಿನ ಸಮಾನ ಹಂಚಿಕೆಗಾಗಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿ ಜನ ಸಾಮಾನ್ಯರು ಸ್ವಾಭಿಮಾನದ ಜೀವನ ಸಾಗಿಸುವಂತೆ ಮಾಡಿದರು ಎಂದರು. ಇಂದಿರಾಗಾಂಧಿ ಅವರು ತನ್ನ 66 ವರ್ಷದಲ್ಲಿ ವಿರೋದಿಗಳ ಗುಂಡಿಗೆ ಬಲಿಯಾಗಿದ್ದು, ದೇಶದ ದುರ್ದೈವ, ಅವರು ಇನ್ನೂ ಸ್ವಲ್ಪ ವರ್ಷಗಳ ಕಾಲ ಬದುಕಿದ್ದರೆ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯಾಗುತ್ತಿತ್ತು ಎಂದರು.

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದ ರಾವ್ ಮಾತನಾಡಿ ಇಂದಿರಾ ಗಾಂಧಿಯವರು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ದಿಸಿ ನಮ್ಮ ಸಂಸದರಾಗಿದ್ದರು ಎನ್ನುವುದೇ ಕಾಂಗ್ರೆಸಿಗರಾದ ನಮಗೆ ಹೆಮ್ಮೆಯ ವಿಚಾರ, ಅವರ ಸ್ಮರಣೆಯಲ್ಲಿ ಕಾರ್ಕಳದಲ್ಲಿ ಭವ್ಯವಾದ ಕಾಂಗ್ರೆಸ್ ಕಚೇರಿ ಇಂಧಿರಾ ಭವನ ನಿರ್ಮಾಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಯಕರು ಹಾಗೂ ಕಾರ್ಯಕರ್ತರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಗೌರವನಮನ ಸಲ್ಲಿಸಿದರು.

ನಗರ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ರೀನಾ ಡಿಸೋಜ ಅವರು ಇಂದಿರಾ ಗಾಂಧಿಯವರ ಆಡಳಿತ ಶ್ರೇಷ್ಟತೆ, ಜೀವನ ಮೌಲ್ಯಗಳ ಸಂಕ್ಷಿಪ್ತ ಮಾಹಿತಿಯನ್ನು ವಾಚಿಸಿ ಅತಿಥಿಗಳನ್ನು ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಉಪಾದ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ಜಿಲ್ಲಾ ಕಾಂಗ್ರೆಸಿನ ಸಿರಿಯಣ್ಣ ಶೆಟ್ಟಿ, ಮಾಲಿನಿ ರೈ, ಮಹಿಳಾ ಒಕ್ಕೂಟದ ಅದ್ಯಕ್ಷೆ ಶ್ರೀಮತಿ ಯಶೋದಾ ಶೆಟ್ಟಿ, ಸೇವಾದಳದ ಅಬ್ದುಲ್ ಸಾಣೂರು, ಭೂನ್ಯಾಯ ಮಂಡಳಿಯ ಸುನೀಲ್ ಭಂಡಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುನಿತಾ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷರಾದ ಪ್ರತಿಮಾ ರಾಣೆ, ರೆಹಮತ್, ಸದಸ್ಯರಾದ ಪ್ರಭಾ, ವಿನ್ನಿ ಬೋಲ್ಡ್, ಶೋಭಾ ಪ್ರಸಾದ್, ಯುವ ಕಾಂಗ್ರೆಸಿನ ಸೂರಜ್ ಶೆಟ್ಟಿ, ಮಂಜುನಾಥ ಜೋಗಿ, ಮಲಿಕ್ ಅತ್ತೂರು, ಯೋಗೀಶ್ ಇನ್ನಾ ಹಾಗೂ ಗ್ಯಾರಂಟಿ ಸಮಿತಿಯ ‌ಸದಸ್ಯರು, ಚುನಾಯಿತ ಜನಪ್ರತಿನಿದಿಗಳು, ನಾಮನಿರ್ದೇಶಿತ ಸದಸ್ಯರು, ವಿವಿಧ ಘಟಕಗಳ ಅದ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷರುಗಳು ಮೊದಲಾದವರು ಉಪಸ್ಥಿತರಿದ್ದರು.

ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ ಹಿರಿಯ ಕಾಂಗ್ರೆಸಿಗ ಪ್ರಭಾಕರ ಬಂಗೇರ ಧನ್ಯವಾದ ಸಮರ್ಪಣೆಗೈದರು.

ಕ್ರೈಸ್ಟ್ ಕಿಂಗ್: ಜಾವೆಲಿನ್ ಎಸೆತದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸುದೀಶ್ ಎಸ್ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

0
???????

 

ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಇವರ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸುದೀಶ್ ಎಸ್. ಶೆಟ್ಟಿ ಬೆಳ್ಳಿ ಪದಕ ಪಡೆದುಕೊಂಡು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ 26-27ನೇ ವರ್ಷದ ನೂತನ ಅಧ್ಯಕ್ಷರಾಗಿ ಸುರೇಶ್ ಅಬ್ಬನಡ್ಕ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ ಆಯ್ಕೆ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ 26ನೇ ಮತ್ತು 27ನೇ ವರ್ಷದ ನೂತನ ಅಧ್ಯಕ್ಷರಾಗಿ ಸುರೇಶ್ ಅಬ್ಬನಡ್ಕ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ ಅವರು ಅವಿರೋಧವಾಗಿ ಸಂಘದ 25ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಸಂಚಾಲಕರಾಗಿ ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ಸ್ಥಾಪಕಾಧ್ಯಕ್ಷರಾಗಿ ವಿಠಲ ಮೂಲ್ಯ, ಗೌರವಾಧ್ಯಕ್ಷರಾಗಿ ರಾಜು ಶೆಟ್ಟಿ ಕುಂಟಲಗುಂಡಿ, ನಿಕಟ ಪೂರ್ವಾಧ್ಯಕ್ಷರಾಗಿ ದಿನೇಶ್ ಪೂಜಾರಿ ಬೀರೊಟ್ಟು, ಉಪಾಧ್ಯಕ್ಷರಾಗಿ ರಘುವೀರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರ್ಯ ಬೋಳ, ಕೋಶಾಧಿಕಾರಿಯಾಗಿ ಪ್ರದೀಪ್ ಸುವರ್ಣ ಕೆಮ್ಮಣ್ಣು, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷರಾಗಿ ಕೀರ್ತನ್ ಪೂಜಾರಿ, ಗೌರವಾಧ್ಯಕ್ಷರಾಗಿ ರಾಜೇಶ್ ಕೋಟ್ಯಾನ್, ಉಪಾಧ್ಯಕ್ಷರಾಗಿ ಅಶ್ವಿನಿ ಬೋಳ, ಕಾರ್ಯದರ್ಶಿಯಾಗಿ ಶ್ರದ್ಧಾ ಪೂಜಾರಿ, ಅಬ್ಬನಡ್ಕ ಚೆಂಡೆ ಬಳಗದ ಅಧ್ಯಕ್ಷರಾಗಿ ಯೋಗೀಶ್ ಆಚಾರ್ಯ ಬೋಳ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ ಸಹಾಯ ಸಂಘದ ಅಧ್ಯಕ್ಷರಾಗಿ ಪುಷ್ಪ ಕುಲಾಲ್, ಕಾರ್ಯದರ್ಶಿಯಾಗಿ ಅಶ್ವಿನಿ ಪ್ರಭಾಕರ್ ಆಯ್ಕೆಯಾಗಿದ್ದಾರೆ.

ಕ್ರೈಸ್ಟ್ ಕಿಂಗ್: ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಹಲವು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ರಾಧಾನಾಯಕ್ ಸರಕಾರಿ ಪ್ರೌಢಶಾಲೆ, ಎಣ್ಣೆಹೊಳೆ, ಕಾರ್ಕಳ ಇಲ್ಲಿ ನಡೆದ 14ರ ವಯೋಮಿತಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಹಲವು ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಅಭಿಷ್ 400 ಮೀ ಓಟ ಮತ್ತು 80ಮೀ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನ, ಸ್ಮಿತಿ ಶೆಟ್ಟಿ ಎತ್ತರ ಜಿಗಿತ ದ್ವಿತೀಯ, ಸುದೀಕ್ಷಾ ಚಕ್ರ ಎಸೆತ ದ್ವಿತೀಯ, 6ನೇ ತರಗತಿಯ ತ್ರಿಷ್ಮಾ 200 ಮೀ ದ್ವಿತೀಯ ಸ್ಥಾನ ಪಡೆದುಕೊಂಡು ತಾಲುಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಬಾಲಕರ 400×100 ರಿಲೇಯಲ್ಲಿ ಎಂಟನೇ ತರಗತಿಯ ಅಭಿಷ್, ಆ್ಯಶ್ಲಿನ್, ಏಳನೇ ತರಗತಿಯ ಪ್ರಸ್ತುತ್ ಮತ್ತು ಆಯುಷ್ ದ್ವಿತೀಯ ಸ್ಥಾನ, ಬಾಲಕಿಯರ 400×100 ರಿಲೇಯಲ್ಲಿ ಎಂಟನೇ ತರಗತಿಯ ಹಿಝ್ಮಾ, ದ್ವಿತಿ, 7ನೇ ತರಗತಿಯ ಹ್ಯಾಷಲ್, ತ್ರಿಷ್ಮಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕೈಯಲ್ಲಿ ತಲವಾರು, ಗನ್, ಕಲ್ಲು ಹಿಡಿದುಕೊಂಡ ಜಿಹಾದಿಗಳ ಬಗ್ಗೆ ಮಾತನಾಡುವ ಧಮ್ ಕಾಂಗ್ರೆಸಿಗಿಲ್ಲ

0

 

ಆರ್.ಎಸ್.ಎಸ್. ಕುರಿತು ಶುಭದ ರಾವ್ ಟೀಕೆ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಆಕ್ರೋಶ

ಜಿಹಾದಿ ಮನಸ್ತಿತಿ ಸಂಘಟನೆಗಳಿಗೆ ಬೆಂಬಲ ಕೊಟ್ಟು ರಾಷ್ಟ್ರೀಯ ಚಿಂತನೆಯ ಸಂಘಟನೆಗೆ ವಿರೋಧ ಮಾಡುವುದು ಕಾಂಗ್ರೆಸ್ ಸಿದ್ಧಾಂತ. ಇದೇ ಮಾನಸಿಕತೆಯಲ್ಲಿ ಇರುವ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅವರ ನಾಲಗೆಯಿಂದ ದೇಶಪ್ರೇಮಿ ಸಂಘಟನೆ ಆರ್.ಎಸ್.ಎಸ್ ಕುರಿತು ಲಘು ಮಾತುಗಳು ಹೊರಬಿದ್ದಿದೆ.

ಕೈಯಲ್ಲಿ ತಲವಾರು, ಗನ್, ಕಲ್ಲು ಹಿಡಿದುಕೊಂಡವರ ಬಗ್ಗೆ ಮಾತನಾಡಲು ಧಮ್ ಇಲ್ಲದ ಇವರ ಕಣ್ಣಿಗೆ ಆರೆಸ್ಸೆಸ್ ನ ಲಾಠಿ, ಹಿಂಸೆಗೆ ಪ್ರಚೋದಕವಾಗಿ ಕಂಡಿರುವುದು ದುರಾದೃಷ್ಟಕರ ಎಂದಿದೆ. ಭಕ್ತಿ ಆಧರಿಸುವ ಮತ್ತು ಶಕ್ತಿ ಆರಾಧಿಸುವ ದೇಶ ಭಾರತ. ಅದೇ ಆಧಾರದಲ್ಲಿ ಪ್ರತಿ ವ್ಯಕ್ತಿಯಲ್ಲಿ ದೇಶ ಭಕ್ತಿಯನ್ನು ಉದ್ದೀಪನಗೊಳಿಸುವ ಮತ್ತು ದೈಹಿಕ, ಮಾನಸಿಕ ಶಕ್ತಿ-ಸಾಮಥ್ರ್ಯವನ್ನು ಬೆಳೆಸುವ ಕಾರ್ಯದಲ್ಲಿ ಆರೆಸ್ಸೆಸ್ ಶತ ವರ್ಷಗಳಿಂದ ತೊಡಗಿಸಿಕೊಂಡಿದೆ. ನಮ್ಮ ದೇವರು-ದೇವತೆಗಳ ಕೈಯಲ್ಲಿರುವ ಆಯುಧಗಳು ಶಕ್ತಿಯ ಸಂಕೇತ. ಶಿಷ್ಟರ ರಕ್ಷಣೆ, ದುಷ್ಟರ ದಮನದ ಸೂಚಕವೂ ಹೌದು. ಆ ಶಕ್ತಿ ಸಂಕೇತಗಳು ನಮ್ಮ ಆತ್ಮಶಕ್ತಿ ಬೆಳೆಸುವುದಕ್ಕೂ ಕಾರಣ ಆಗುತ್ತವೆ. ಇದೆಲ್ಲದರ ಸಂಜ್ಞೆ ಅಥವಾ ಸಂಕೇತ ನಮ್ಮ ರಕ್ಷಣೆಯೇ ಹೊರತು ಬೇರೆಯವರ ಮೇಲೆ ದಾಳಿ ಮಾಡುವ ಉದ್ದೇಶವಲ್ಲ. ಆರೆಸ್ಸೆಸ್ ಸ್ವಯಂಸೇವಕರು ಬಳಸುವ ಲಾಠಿ ಕೂಡ ಆತ್ಮಸ್ಥೈರ್ಯ ಹೆಚ್ಚಿಸುವ, ಆತ್ಮರಕ್ಷಣೆ ಮಾಡುವ ಕಲೆಯನ್ನು ಕಲಿಸುವ ಉದ್ದೇಶವೇ ಹೊರತು ದೊಂಬಿ ಮಾಡುವ ಉದ್ದೇಶದ್ದಲ್ಲ, ನೂರು ವರ್ಷದಲ್ಲಿ ಅಂತಹ ಒಂದೇ ಒಂದು ಉದಾಹರಣೆಯೂ ದೇಶದಲ್ಲಿ ಸಿಗುವುದಿಲ್ಲ. ಇದನ್ನು ಕುಹಕವಾಡುವ ಹೀನ ಮನೊಭಾವ ಕಾಂಗ್ರೆಸಿನದ್ದು.

ಸ್ವಾತಂತ್ರ್ಯದ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷ ಸೇವಾದಳ ಸಂಘಟನೆ ಆರಂಭಿಸಿದ್ದಕ್ಕೂ ಆರೆಸ್ಸೆಸ್ ಮಾದರಿ ಆಗಿತ್ತು. ಆದರೆ ಇಂದು ಅದೇ ಸೇವಾ ದಳದ ಕತೆ ಏನಾಗಿದೆ? ಎಂಬುದನ್ನು ಶುಭದ ರಾವ್ ಸಹಿತ ಕಾಂಗ್ರೆಸ್ ನಾಯಕರು ಮೊದಲು ಅರಿತು ಬಳಿಕ ಆರ್ ಎಸ್ ಎಸ್ ಬಗ್ಗೆ ಮಾತಾಡಲಿ. ಆರೆಸ್ಸೆಸ್ ದೂಷಿಸುವವರು, ನಿರ್ಭಂಧಿಸಲು ಹವಣಿಸುವವರು ಆ ಬಗ್ಗೆ ಯೋಚನೆ ಮಾಡುವುದು ಒಳಿತು ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರ್ಸಿಂಗ್ ಕಾಲೇಜು ಸಮಸ್ಯೆಗೆ ಶಾಸಕ ಸುನಿಲ್ ಕುಮಾರ್ ನೇರ ಹೊಣೆ

0

ಶಾಸಕರ ನಿರ್ಲಕ್ಷದ ಫಲವಾಗಿ ವಿದ್ಯಾರ್ಥಿಗಳು ಬೀದಿಗೆ ಬಂದಿದ್ದಾರೆ: ಶುಭದ್ ರಾವ್

ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾರಂಭಗೊಂಡ ನರ್ಸಿಂಗ್ ಕಾಲೇಜಿನ ಅವ್ಯವಸ್ಥೆಗೆ ಕಾಲೇಜಿನ ವಿದ್ಯಾರ್ಥಿಗಳು ಇಂದು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಶಾಸಕ ಸುನಿಲ್ ಕುಮಾರ್ ಅವರೇ ನೇರ ಹೊಣೆಯಾಗಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹೇಳಿದ್ದಾರೆ.

ಸುನಿಲ್ ಕುಮಾರ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಚಾರದ ಹುಚ್ಚಿನಿಂದ ಯಾವುದೇ ಅನುದಾನವನ್ನು ಮೀಸಲಿಡದೆಯೆ ಕೇವಲ ಕಾಟಾಚಾರಕ್ಕೆ ನರ್ಸಿಂಗ್ ಕಾಲೇಜನ್ನು ಉದ್ಘಾಟನೆ ಮಾಡಿದ ಫಲವಾಗಿ ಇವತ್ತು ಕಾಲೇಜಿನಲ್ಲಿ ಅವ್ಯವಸ್ಥೆ ತಲೆದೋರಿದ್ದು, ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ಪ್ರತಿಭಟನೆ ನಡೆಸುವಂತಾಗಿದೆ.

ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕರ ಸಮಸ್ಯೆ, ಕಟ್ಟಡದ ಸಮಸ್ಯೆ, ಪೀಠೋಪಕರಣಗಳ ಸಮಸ್ಯೆ, ವೈಜ್ಞಾನಿಕ ಉಪಕರಣಗಳ ಸಮಸ್ಯೆ ಇದ್ದರೂ ಕೂಡ ಕೇವಲ ಚುನಾವಣೆಯ ದೃಷ್ಟಿಯಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿ ಸುನಿಲ್ ಕುಮಾರ್ ಅವರು ನರ್ಸಿಂಗ್ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿದ್ದಾರೆ. ವಿದ್ಯಾರ್ಥಿ ಜೀವನದ ಅದ್ಯಯನದ ಅಮೂಲ್ಯ ಸಮಯದಲ್ಲಿ ತಮ್ಮ ರಾಜಕೀಯಕ್ಕಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಚೆಲ್ಲಾಟವಾಡಿರುವುದಕ್ಕೆ ಶಾಸಕ ಸುನಿಲ್ ಕುಮಾರ್ ಅವರು ವಿದ್ಯಾರ್ಥಿಗಳ ಕ್ಷಮೆಯನ್ನು ಯಾಚಿಸಬೇಕು.

ಚುನಾವಣೆಯ ನಂತರವಾದರೂ ಶಾಸಕರು ಈ ಕುರಿತು ಜವಾಬ್ದಾರಿ ವಹಿಸಿ ನರ್ಸಿಂಗ್ ಕಾಲೇಜಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು, ತನ್ನ ಜವಾಬ್ದಾರಿಯನ್ನು ಮರೆತ ಸುನೀಲ್ ಕುಮಾರ್ ಕೇವಲ ರಾಜಕೀಯ ಹೇಳಿಕೆಗಳನ್ನು ನೀಡುತ್ತಾ ವ್ಯರ್ಥ ಕಾಲಹರಣ ಮಾಡಿದ್ದಾರೆ, ಈಗ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿಯ ವಿದ್ಯಾರ್ಥಿ ಘಟಕದ ಮೂಲಕ ನರ್ಸಿಂಗ್ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸಿದ್ದಾರೆ.

ತನ್ನ ರಾಜಕೀಯಕ್ಕಾಗಿ ವಿದ್ಯೆ ಕಲಿಯುವ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡುವುದನ್ನು ಬಿಟ್ಟು ಮಾನ್ಯ ಮುಖ್ಯಮಂತ್ರಿಯವರನ್ನು, ಮಾನ್ಯ ಆರೋಗ್ಯ ಸಚಿವರ ಬೆನ್ನು ಬಿದ್ದು ಕಾರ್ಕಳ ನರ್ಸಿಂಗ್ ಕಾಲೇಜಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳುವುಲ್ಲಿ ಶಾಸಕ ಸುನೀಲ್ ಕುಮಾರ್ ಮುಂದಾಗಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಮ್ಮ ಹೇಳಿಕೆಯಲ್ಲಿ ‌ತಿಳಿಸಿದ್ದಾರೆ.